ಜೆಡಿಎಸ್ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ ಕ್ರಮಬದ್ಧ
ಕೋಲಾರ: ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರು 1994ರಲ್ಲಿ ಮಾಲೂರು ತಾಲೂಕಿನ ತಹಸೀಲ್ದಾರ್ ಅವರಿಂದ ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಲಾಗಿದೆ ಎಂದು ಅಭ್ಯರ್ಥಿಯ ಪರ ವಕೀಲ ಶಂಕರಪ್ಪ ತಿಳಿಸಿದರು. ಕೇಶವ ಅವರ ಪರ ವಾದ ಮಂಡಿಸಲು ಬಂದಿದ್ದ ಶಂಕರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾಧಿಕಾರಿಗಳು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕೇಳಿದ ವಿವರಗಳನ್ನು ನೀಡಲಾಯಿತು. ಕೇಶವ ಅವರ ಜಾತಿ ಪ್ರಮಾಣ ಪತ್ರ ಕ್ರಮಬದ್ಧವಾಗಿದೆ. ನಾಮಪತ್ರ ಸಲ್ಲಿಕೆ ಸಮಯದಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆಯ ಅವಶ್ಯಕತೆ ಇಲ್ಲ. ಆದರೂ ಜಾತಿ ದೃಢೀಕರಣ ಪತ್ರವನ್ನು ನಾಮಪತ್ರದೊಂದಿಗೆ ನೀಡಲಾಗಿದ್ದು 1994ರಲ್ಲಿ ಪಡೆದಿರುವ ಜಾತಿ ಪ್ರಮಾಣ ಪತ್ರ ಕ್ರಮಬದ್ಧವಾಗಿದೆ ಎಂದರು.