ಯೋಗಕ್ಷೇಮ ವಿಚಾರಿಸಲು ಮುಗಿಬಿದ್ದ ಮುಖಂಡರು
ಚಿಂತಾಮಣಿ: ತಾಲೂಕಿನ ದೊಡ್ಡಗಂಜೂರು ಗ್ರಾಮದ ಜೆಡಿಎಸ್ ಬೆಂಬಲಿಗ ಕೊಲೆಯಾಗಿ, ಇಬ್ಬರು ಹಲ್ಲೆಗೊಳಗಾದ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಗಾಯಾಳುಗಳ ಯೋಗಕ್ಷೇವು ವಿಚಾರಿಸಲು ಸರದಿ ಸಾಲಿನಲ್ಲಿ ಬರುತ್ತಿದ್ದಾರೆ.
ತಾಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿ ಜೆಡಿಎಸ್ ಮುಖಂಡ ನಂಜರೆಡ್ಡಿ ಕೊಲೆಯಾಗಿದ್ದು, ಮಗ ನಾರಾಯಣರೆಡ್ಡಿ ಹಾಗೂ ಸೊಸೆ ವಿಜಯಮ್ಮ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಯೋಗಕ್ಷೇವು ವಿಚಾರಿಸಲು ಹಲವು ರಾಜಕೀಯ ಮುಖಂಡರು ಆಸ್ಪತ್ರೆಗೆ ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದು, ಚುನಾವಣೆಯ ಲಾಭ ಪಡೆದುಕೊಳ್ಳುವ ಹುನ್ನಾರ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.