ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಡಿಎಸ್ ಅಭ್ಯರ್ಥಿ ಬಳಿ ರು. 15.33 ಕೋಟಿ ಆಸ್ತಿ

Vishwanath S
Updated On : 23 Mar 2014, 1:09 am

ಕೋಲಾರ: ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ. ಕೇಶವರ ಒಟ್ಟು ಆಸ್ತಿಯ ಮೌಲ್ಯ 15.33 ಕೋಟಿ ರು. ಮತ್ತು ಅವರ ಪತ್ನಿ ಕೆ. ಹೇಮಲತಾರ ಆಸ್ತಿಯ ಮೊತ್ತ 1.49 ಕೋಟಿ ರು. ಹಾಗೂ ಅವರ ಇಬ್ಬರು ಮಕ್ಕಳಾದ ಸುಷ್ಮಿತಾ ಮತ್ತು ವೆಂಕಟ ಭಾನು ಪ್ರಕಾಶ್ ಬಳಿ ಯಾವುದೇ ಆಸ್ತಿ ಇಲ್ಲ.
2012-13ನೇ ಸಾಲಿನಲ್ಲಿ ಕೇಶವ 66,80,260 ರು. ವಾರ್ಷಿಕ ಆದಾಯಕ್ಕೆ ತೆರಿಗೆ ಪಾವತಿಸಿದ್ದಾರೆ, ಪತ್ನಿ ಹೇಮಲತಾ ಇದೇ ಅವಧಿಯಲ್ಲಿ 59.72 ಲಕ್ಷ ರು.ಗಳಿಗೆ ತೆರಿಗೆ ಕಟ್ಟಿದ್ದಾರೆ. ಕೇಶವರ ಬಳಿ 39.50 ಲಕ್ಷ ರು. ನಗದು ಹಣವಿದೆ, ಹಲವರಿಗೆ 31.48 ಲಕ್ಷ ರು. ವೈಯುಕ್ತಿಕ ಸಾಲ ನೀಡಿದ್ದಾರೆ, 23.50ಲಕ್ಷ. ಮೌಲ್ಯದ 1ಕೆಜಿ ಚಿನ್ನಾಭರಣ, 6ಬ್ಯಾಂಕ್‌ಗಳಲ್ಲಿರುವ 2.63ಲಕ್ಷ ರು. ಸೇರಿ ಒಟ್ಟು 2.84 ಕೋಟಿ ರು. ಚರಾಸ್ತಿ ಇದ್ದರೆ ಹೇಮಲತಾರಲ್ಲಿ 7.22ಲಕ್ಷರು. ನಗದು ಹಣವಿದ್ದರೆ 68.75ಲಕ್ಷರು. ಬೆಲೆಯ ಎರಡೂವರೆ ಕೆಜಿ ಚಿನ್ನ, ನಾಲ್ಕೂವರೆ ಲಕ್ಷ ರು. ಬೆಲೆಯ ಗೃಹೋಪಯೋಗಿ ವಸ್ತುಗಳು ಹಾಗೂ 2 ಬ್ಯಾಂಕ್ ಖಾತೆಗಳಲ್ಲಿರುವ 40737 ರು,  ಸೇರಿ ಒಟ್ಟು 1.06ಕೋಟಿ ರು. ಗಳ ಚರಾಸ್ತಿ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.
ತಾವೇ ಚೇರ್ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮ್ಯಾಕ್ಸ್‌ವರ್ಥ್ ರಿಯಾಲಿಟಿ ಇಂಡಿಯಾ ಲಿಮಿಟೆಡ್‌ನಲ್ಲಿ 1.74ಕೋಟಿ ರು. ಮತ್ತು ಮ್ಯಾಕ್ಸ್‌ವರ್ಥ್ ವೆಂಚರ್ಸ್‌ನಲ್ಲಿ 2.50 ಲಕ್ಷ ರು.ಗಳನ್ನು ಕೇಶವ ಷೇರು ಮೊತ್ತ ಹೂಡಿದ್ದಾರೆ, ಪತ್ನಿ ಸುಮಲತಾ ಎರಡೂ ಸಂಸ್ಥೆಗಳಲ್ಲಿ ಕ್ರಮವಾಗಿ 23.25ಲಕ್ಷ ರು. ಮತ್ತು 2.50ಲಕ್ಷ ರು. ಸೇರಿ ಒಟ್ಟು 25.75ಲಕ್ಷ ರು ಷೇರು ಹೂಡಿದ್ದಾರೆ.
ಕೇಶವಗೆ ದೇವನಹಳ್ಳಿ ತಾಲೂಕಿನ ದ್ಯಾವರಹಳ್ಳಿ, ಬುಲ್ಲಹಳ್ಳಿ ಮತ್ತು ಹಾಸನ ಜಿಲ್ಲೆ ಹೂವಿನಹಳ್ಳಿಯಲ್ಲಿ 3.17ಕೋಟಿ ರು. ಬೆಲೆಯ ಒಟ್ಟು 7.16ಎಕರೆ ಜಮೀನು ಇದೆ, ದೇವನಹಳ್ಳಿ ತಾಲೂಕು ದಿಂಡ್ಲುವಿನಲ್ಲಿ 1.40ಕೋಟಿ ರು. ಬೆಲೆಯ 1ಎಕರೆ ಹಾಗೂ ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಪೊನ್ನುಟಪಾಲೇಮ್ ಗ್ರಾಮದಲ್ಲಿ 12ಲಕ್ಷ ರು. ಬೆಲೆಯ 2178ಚದರಡಿ ಕೃಷಿಯೇತರ ಜಮೀನು ಇದೆ.
ಬೆಂಗಳೂರಿನ ಭಟ್ಟರಹಳ್ಳಿಯಲ್ಲಿ 75ಲಕ್ಷರು. ಬೆಲೆಯ 1200 ಚದರಡಿ 3ಮಹಡಿ ಮನೆಯಿದೆ ಮತ್ತು ಆರ್‌ಎಂವಿ ಲೇಔಟ್‌ನಲ್ಲಿ 2401 ಚದರಡಿ ಅಳತೆಯಲ್ಲಿ 7 ಕೋಟಿ ರು. ಬೆಲೆಯ ಮನೆ ನಿರ್ಮಾಣ ಹಂತದಲ್ಲಿದೆ. ಅವರ ಪತ್ನಿಗೆ ಮತ್ತಿಕೆರೆಯಲ್ಲಿ ಪೋಷಕರಿಂದ ಕೊಡುಗೆಯಾಗಿ ಬಂದ 43.20ಲಕ್ಷ ರು.ಗಳ 1080ಚದರಡಿ ಜಮೀನು ಇದೆ.
ಕೇಶವ ಸೆಂಟ್ರಲ್ ಬ್ಯಾಂಕ್‌ನಿಂದ 4.37ಕೋಟಿ ರು. ಹೌಸಿಂಗ್ ಸಾಲ ತೆಗೆದುಕೊಂಡಿದ್ದರೆ ತಾವೇ ಅಧ್ಯಕ್ಷರಾಗಿರುವ ಮ್ಯಾಕ್ಸ್‌ವರ್ಥ್ ಕಂಪೆನಿಯಿಂದ 3.18ಕೋಟಿ ರು. ಸಾಲ ಪಡೆದಿದ್ದಾರೆ. ಕೇಶವ ಮ್ಯಾಕ್ಸ್‌ವರ್ಥ್ ರಿಯಾಲಿಟಿ ಕಂಪನಿಯ ಅಧ್ಯಕ್ಷರಾಗಿದ್ದರೆ ಅವರ ಪತ್ನಿ ಅದೇ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement