ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್ ಬೆಂಬಲಿಸಲು ನಿರ್ಧಾರ

Rashmi Kasaragodu
Updated On : 24 Mar 2014, 12:40 pm

ಮಾಲೂರು: ಸಾಮಾಜಿಕ ನ್ಯಾಯ ನೀಡುತ್ತಿರುವ ಕಾಂಗ್ರೆಸ್‌ನ್ನು ಸಮುದಾಯ ಬೆಂಬಲಿಸಲಿದೆ ಎಂದು ಜಿಲ್ಲಾ ಎಸ್ಸಿ, ಎಸ್ಟಿ ಸಮಿತಿ ಕೋಲಾರ ನಾಗರಾಜು ಹೇಳಿದರು. ಪಟ್ಟಣದ ಹೂರವಲಯದಲ್ಲಿ ಭಾನುವಾರ ನಡೆದ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿ, ಹಿಂದಿನಿಂದಲ್ಲೂ ವಾಲ್ಮೀಕಿ ಸಮುದಾಯ ಅಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿರುವ ಕಾಂಗ್ರೆಸ್‌ಗೆ ಜನಾಂಗ ಬೆಂಬಲವಾಗಿ ನಿಂತಿದೆ. ಈ ಬಾರಿಯ ರಾಜ್ಯ ಸರ್ಕಾರದ ಅಯವ್ಯಯದಲ್ಲಿ ಮುಖ್ಯಮಂತ್ರಿಗಳು ಸಮುದಾಯದ ಅಭಿವೃದ್ಧಿಗೆ ಒಂದು ಕೋಟಿ ಮೀಸಟ್ಟಿರುವುದಲ್ಲದೇ ಸಾಲಮನ್ನಾ ಮಾಡಿ ಸಮುದಾಯದವರ ಅರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು. ಸಭೆಯಲ್ಲಿ  ಜನಾಂಗದ ಟಿ. ಶ್ರೀನಿವಾಸ್, ಯಶವಂತಪುರ ಗೋಪಾಲ್, ಚಲಪತಿ, ಟಿ.ಕೆ. ನಾಗರಾಜ್ ಕಾಂಗ್ರೆಸ್‌ನ್ನು ಬೆಂಬಲಿಸಿಲು ನಿರ್ಧರಿಸಿದರು.


ಮತದಾನ ಕುರಿತು ಜಾಗೃತಿ ಕಾರ್ಯಕ್ರಮ
ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನ ಕಲಾಸಂಘ, ಸಮಾಜಶಾಸ್ತ್ರ ವಿಭಾಗದ ಸಬಲೀಕರಣ ವೇದಿಕೆ, ಕನ್ನಡ ಸಂಘ, ವಿಜ್ಞಾನಸಂಘ, ವಾಣಿಜ್ಯ ಸಂಘ, ಯೂನಿಯನ್ - ಹೀಗೆ ಎಲ್ಲರೂ ಸಭಾಂಗಣದಲ್ಲಿ ಸೇರಿ ಪ್ರಾಂಶುಪಾಲರು, ಬೋಧಕವರ್ಗ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಕಡ್ಡಾಯ ಮತದಾನದ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಮತದಾನದ ಪ್ರತಿಜ್ಞೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement