ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಕ್ಕಳ ಮನಸ್ಸು ವಿರೂಪಗೊಳ್ಳದಂತೆ ಎಚ್ಚರವಹಿಸಿ: ಎಸ್.ಬಿ. ಮಜ್ಜಿಗೆ

Rashmi Kasaragodu
Updated On : 24 Mar 2014, 12:41 pm

ಕೋಲಾರ: ಮಕ್ಕಳನ್ನು ದೇವರ ರೂಪದಲ್ಲಿ ಕಾಣಬೇಕು. ನಿಷ್ಕಲ್ಮಶವಾದ ಮಕ್ಕಳ ಮನಸ್ಸು ವಿರೂಪಗೊಳ್ಳದಂತೆ ಪೋಷಕರು ಮತ್ತು ಶಿಕ್ಷಕರು ಗಮನ ನೀಡಬೇಕೆಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ. ಮಜ್ಜಿಗೆ ಅಭಿಪ್ರಾಯಪಟ್ಟರು.
ಕೋಲಾರ ನಗರದ ಆನಂದ ಮೂರ್ತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪ್ರಾರಂಭದಿಂದ ಯಾರೂ ಬುದ್ಧಿವಂತರಾಗಿರುವುದಿಲ್ಲ, ಅವರು ಬೆಳೆಯುವ ಪರಿಸರ, ವಾತಾವರಣ, ಪೋಷಕ ಹಾಗೂ ಶಿಕ್ಷಕರ ಸಹಕಾರದಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಮಕ್ಕಳು ದೃಢನಿರ್ಧಾರದಿಂದ ಕಷ್ಟಪಟ್ಟರೆ ಪ್ರತಿಫಲ ದೊರೆಯುತ್ತದೆ. ಜೀವನದಲ್ಲಿ ಕೆಲವನ್ನು ಪಡೆಯಬೇಕಾದರೆ ಕೆಲವು ತ್ಯಾಗ ಮಾಡಬೇಕಾಗುತ್ತದೆ. ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement