ವೆಂಕಟಮುನಿಯಪ್ಪ ಶೀಘ್ರದಲ್ಲೇ ಬಿಜೆಪಿಗೆ
ಬಂಗಾರಪೇಟೆ: ಕಳೆದ ವರ್ಷದಿಂದ ರಾಜಕೀಯವಾಗಿ ಅತಂತ್ರರಾಗಿರುವ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪರಿಗೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಿಲ್ಲದ ಬೇಡಿಕೆ ಬಂದಿದು,್ದ ಬಿಜೆಪಿ ಮತ್ತು ಜೆಡಿಎಸ್ ಅವರನ್ನು ತನ್ನತ್ತ ಸಳೆಯಲು ಮುಂದಾಗಿವೆ. ಜನತಾಪರಿವಾರ ಬಿಟ್ಟು ಬಿಜೆಪಿ ಸೇರಿ ಶಾಸಕರಾಗಿದ್ದ ವೆಂಕಟಮುನಿಯಪ್ಪ ಬಿಜೆಪಿ ತೊರೆದು ಜೆಡಿಎಸ್ ಸೇರಿದರೂ ತಮ್ಮ ಪ್ರಭಾವ ತೋರಿಸಲು ಸಾಧ್ಯವಾಗಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಅಭ್ಯರ್ಥಿ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಬಲಗೈ ಭಂಟ ಜುಂಜನಹಳ್ಳಿ ನಾರಾಯಣಸ್ವಾಮಿ ಮತ್ತು ಪಕ್ಷದ ಅಧ್ಯಕ್ಷ ಮಾರ್ಕಂಡೇಗೌಡ ನೇತೃತ್ವದಲ್ಲಿ ವೆಂಕಟಮುನಿಯಪ್ಪರ ನಿವಾಸಕ್ಕೆ ತೆರಳಿ ಸಂಧಾನ ಮಾತುಕತೆ ನಡೆಸಿ ಮರಳಿ ಬಿಜೆಪಿಗೆ ಬರುವಂತೆ ಮಾಡಿದ ಮಾತುಕತೆ ಫಲ ನೀಡಿದ್ದು ಇಷ್ಟರಲ್ಲೆ ಸಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.