ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮರ್ಪಕ ಅಡುಗೆ ಅನಿಲ ವಿತರಣೆಗೆ ಆಗ್ರಹ

Rashmi Kasaragodu
Updated On : 24 Mar 2014, 12:42 pm

ಶಿಡ್ಲಘಟ್ಟ: ಅಡುಗೆ ಅನಿಲವನ್ನು ವಿತರಿಸಿದ ಕಾರಣ ಗ್ರಾಮಸ್ಥರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ತಾಲೂಕು ಕಚೇರಿ ಮುಂದೆ ಇಟ್ಟು ರಸ್ತೆ ಬಂದ್ ಮಾಡಿದ ಪ್ರಕರಣ ನಡೆಯಿತು.
ಪ್ರತಿ ಭಾನುವಾರ ಹಾಗೂ ಗುರುವಾರ ಗ್ರಾಮಸ್ಥರಿಗೆ ಪಟ್ಟಣದ ವಿಜಯಲಕ್ಷಿ ಹಿಂಭಾಗದ ಮೈದಾನದಲ್ಲಿ ಅಡುಗೆ ಅನಿಲ ವಿತರಣೆ ಮಾಡುತ್ತಿದ್ದರು. ಕಳೆದ 15 ದಿನಗಳಿಂದ ನೀಡದ ಕಾರಣ ರೊಚ್ಚೆಗೆದ್ದ ಗ್ರಾಮಸ್ಥರು ಮೊದಲು ಪುರಠಾಣೆ ಎದುರು ಖಾಲಿ ಸಿಲಿಂಡರ್‌ಗಳನ್ನು ಇಟ್ಟು ರಸ್ತೆ ತಡೆ ನಡೆಸಿದರು. ನಂತರ ತಾಲೂಕು ಕಚೇರಿ ಮುಂಭಾದಲ್ಲಿ ಖಾಲಿ ಸಿಲಿಂಡರ್‌ಗಳನ್ನು ಇಟ್ಟು ರಸ್ತೆ ತಡೆ ನಡೆಸಿದರು.  ಪುರ ಠಾಣೆ ಪಿಎಸ್‌ಐ ಪುರುಷೋತ್ತಮ್ ಗ್ರಾಮಸ್ಥರಿಗೆ ಸಮಾಧಾನ ಮಾಡಿ ಗ್ಯಾಸ್ ಕಚೇರಿ ಅಧಿಕಾರಿಗಳನ್ನು ಕರೆಸಿ ಮಾತನಾಡಿ ಇಂದೇ ಗ್ಯಾಸ್ ವಿತರಣೆ ಮಾಡುವ ಬರವಸೆ ನೀಡಿದ ನಂತರ ರಸ್ತೆ ತಡೆ ನಿಲ್ಲಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement