ಹಬ್ಬಗಳಿಂದ ಸಾಮರಸ್ಯ ಸಾಧ್ಯ
ಮುಳಬಾಗಲು: ತಲೆಮಾರುಗಳಿಂದ ಅಚರಿಸುತ್ತಿರುವ ಹಬ್ಬಗಳಿಗೆ ವೈಶಿಷ್ಟತೆಯಿದೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ಹೇಳಿದರು. ಪಟ್ಟಣದ ಕುರುಬರಪೇಟೆಯಲ್ಲಿ ಶುಕ್ರವಾರ ಹಾಲು ಮತಸ್ಥರು ಆಯೋಜಿಸಿದ್ದ ಗೌರಿ ಹಬ್ಬ ಹಾಗೂ ದೀಪೋತ್ಸವ ಕಾರ್ಯಕ್ರದಲ್ಲಿ ಮಾತನಾಡಿ, ಸಮಾನತೆ, ಸಾಮರಸ್ಯ ತರುವ ನಿಟ್ಟಿನಲ್ಲಿ ಪೂರ್ವಜರು ಹಬ್ಬ ಆಚರಿಸುತ್ತಿದ್ದರು. ದಿನ ಕಳೆದಂತೆ ಆಚರಣೆಗಳು ಅಧುನಿಕ ತಂತ್ರಜ್ಞಾನಕ್ಕೆ ಒಳಗಾಗಿ ಮಾಯವಾಗಿದೆ ಎಂದರು. ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ರಾಮಲಿಂಗಾರೆಡ್ಡಿ, ತಾಲೂಕು ಭೂ ಬ್ಯಾಂಕ್ ಅಧ್ಯಕ್ಷ ಎಂ.ಸಿ. ನೀಲಕಂಠೇಗೌಡ, ಪುರಸಭೆ ಸದಸ್ಯ ಗೋಪಿ, ಮೀಸೆ ಕೃಷ್ಣಪ್ಪ, ಯಜಮಾನ್ ವೆಂಕಟಪ್ಪ, ರಾಮಪ್ಪ, ಶಂಕರ್, ಗೌಡರ ಶಿವಣ್ಣ, ಗೊಲ್ಲಹಳ್ಳಿ ವೆಂಕಟೇಶ್, ಕಾರ್ ಶ್ರೀನಿವಾಸ್, ಮೆಕಾನಿಕ್ ಶ್ರೀನಿವಾಸ್, ಜಮ್ಮನಹಳ್ಳಿ ಕೃಷ್ಣಪ್ಪ ಇದ್ದರು.
ಆಮ್‌ಆದ್ಮಿಯಿಂದ ಇಂದು ನಾಮಪತ್ರ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆರ್ಕೇಶ್ ಮಾ.24 ರಂದು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ನಗರದ ಸರ್.ಎಂ. ವಿಶ್ವೇಶ್ವರಯ್ಯ ವೃತ್ತದಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ರ್ಯಾಲಿ ನಡೆಸಲಿರುವ ಅವರು, ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಜಿಂಕೆ ಸಾವು
ಕೋಲಾರ: ಕುಡಿಯುವ ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಜಿಂಕೆಗೆ ಅಪರಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ ಜರುಗಿದೆ. ತಾಲೂಕಿನ ವಡುಗೂರು ಗ್ರಾಮದ ಬಳಿ ಗಂಡು ಜಿಂಕೆಯೊಂದು ರಸ್ತೆ ದಾಟುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಡುವಂತಾಗಿದೆ. ಅರಣ್ಯ ಇಲಾಖೆಯವರು ಈ ಜಿಂಕೆಯ ಶವವನ್ನು ನಗರದ ಪಶುವೈದ್ಯಾಸ್ಪತ್ರೆಗೆ ತಂದು ಶವಪರೀಕ್ಷೆ ನಡೆಸಿದರು.
ಆದೇಶ
ಬಾಗೇಪಲ್ಲಿ: ಜೆಡಿಎಸ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯ ಸಿ.ಡಿ. ಗಂಗುಲಪ್ಪರನ್ನು ನೇಮಕ ಮಾಡಿ ರಾಜ್ಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ. ಶ್ರೀರಾಮಯ್ಯ ಆದೇಶಿಸಿದ್ದಾರೆ.