'ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ'
ಮುಳಬಾಗಲು: ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದು ಕೇಂದ್ರ ಸಚಿವ ಹಾಗೂ ಕೋಲಾರ ಕ್ಷೇತ್ರದ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಹೇಳಿದರು. ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಕೋಲಾರ ಜಿಲ್ಲೆಯ ಮತದಾರರು ತಮ್ಮನ್ನು ಆರು ಬಾರಿ ಆಯ್ಕೆ ಮಾಡಿದ್ದಾರೆ.
ನಾನು ಕೋಲಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸೇವೆ ಸಲ್ಲಿಸಿದ್ದೇನೆ. ರೇಲ್ವೆ, ಸಾರಿಗೆ ಹಾಗೂ ಅರ್ಥಿಕ ಅಭಿವೃದ್ಧಿ ಕ್ಷೇತ್ರಗೆಳಿಗೆ ಹೆಚ್ಚಿನ ಹಣಕಾಸು ನೆರವು ತಂದಿದ್ದು, ಮೈಸೂರು ಮಹರಾಜರ ಕಾಲದಲ್ಲಿ ನಡೆಯುತ್ತಿದ್ದ ಯಲಹಂಕ ಮತ್ತು ಬಂಗಾರು ಪೇಟೆ ರೈಲನ್ನು ಮತ್ತೆ ಪ್ರಾರಂಭಿಸಿದ್ದೇನೆ ಎಂದರು. ಮುಖಂಡರಾದ ವಿ.ಆರ್. ಸುದರ್ಶನ್, ಬಿಸೇಗೌಡ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲಿಲ್ಕುಮಾರ್, ಉತ್ತನೂರು ಶ್ರೀನಿವಾಸ್, ಎ.ವೆಂಕಟೇಶಮೂರ್ತಿ, ಜಿ.ರಾಮಲಿಂಗಾರೆಡ್ಡಿ, ನೀಲಕಂಠೇಗೌಡ, ಅಪ್ರೋಜ್ ಪಾಶ, ಪ್ರೊಫೆಸರ್ ಅನಂತು, ವಕೀಲ ಚೌಡೇಗೌಡ ಮುಂತಾದವರು ಇದ್ದರು.