ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರಮ್ಮನ ಬ್ರಹ್ಮ ರಥೋತ್ಸವ

Rashmi Kasaragodu
Updated On : 25 Mar 2014, 1:37 am

ಕೋಲಾರ: ನಗರದ ಆದಿ ದೇವತೆಯಾದ ಶ್ರೀ ಕೋಲಾರಮ್ಮ ದೇವಿಯ ಬ್ರಹ್ಮ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಸುಡು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಕೋಲಾರದ ಕೋಟೆ ಪ್ರದೇಶದಲ್ಲಿ ದೇವಿಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಜನರಿಗೆ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಣೆ ಮಾಡಿದರು. ನಗರದ ಡೂಮ್‌ಲೈಟ್ ವೃತ್ತದಲ್ಲಿ ಭಕ್ತರು ದೇವಿಯ ಚಿತ್ರವಿರುವ ದೊಡ್ಡ ಫ್ಲೆಕ್ಸ್ ಹಾಕಿ ಪೂಜೆ ಸಲ್ಲಿಸಿದರು.
ನಗರ ಸಿಪಿಐ ಶಿವಕುಮಾರ್, ಪಿಎಸ್‌ಐ ಸುಧಾಕರರೆಡ್ಡಿ, ದೇವಿ ಭಕ್ತರಾದ ಶ್ರೀಧರ್, ಕೋಲಾರಮ್ಮ ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಮುನಿವೆಂಕಟಪ್ಪ, ನರೇಂದ್ರಬಾಬು,ನಾರಾಯಣಸ್ವಾಮಿ,ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement