ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೋದಿ ಕಾಂಗ್ರೆಸ್‌ನಂತೆ ಕಾರ್ಯಕ್ರಮ ರೂಪಿಸಲ್ಲ'

Rashmi Kasaragodu
Updated On : 25 Mar 2014, 1:36 am

ಶಿಡ್ಲಘಟ್ಟ: ನೂರಾರು ನರೇಂದ್ರ ಮೋದಿಗಳು ಹುಟ್ಟಿಕೊಂಡರೂ ಯುಪಿಎ ಸರ್ಕಾರ ಮಾಡಿದಂಥ ಜನಪರ ಕಾರ್ಯಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ಮಾ.26ರಂದು ನಡೆಸಲು ಉದ್ದೇಶಿಸಲಾಗಿರುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆಹಾರ ಭದ್ರತಾ ಕಾಯ್ದೆ, ಆರ್‌ಟಿಐ ಸೇರಿದಂತೆ ಯುಪಿಎ ಜನರಿಗೆ ಉಪಯೋಗವಾಗುವಂಥ ಅನೇಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದ ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿರುವ ಸರ್ಕಾರ, ಅನ್ನಭಾಗ್ಯ, ಕ್ಷೀರ ಭಾಗ್ಯ, ಮನಸ್ವಿನಿ ಯೋಜನೆ, ಪ್ರವಾಸ ಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಈ ಬಾರಿ ಕಾಂಗ್ರೆಸ್ ಕಾರ್ಯಕರ್ತರ ಮತಯಾಚನೆ ಮಾಡಬೇಕು' ಎಂದು ಅವರು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಸುಬ್ರಮಣಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಮುನಿಕೃಷ್ಣಪ್ಪ, ಮುಖಂಡರಾದ ಎಸ್.ಎಂ. ನಾರಾಯಣಸ್ವಾಮಿ, ಗಂಗನಹಳ್ಳಿ ಬಿ.ಸಿ. ವೆಂಕಟೇಶ್, ಮುತ್ತೂರು ಚಂದ್ರೇಗೌಡ, ನಾಗಮಂಗಲ ತಮ್ಮಣ್ಣ, ತನ್ವೀರ್ ಅಹ್ಮದ್, ತಾಪಂ ಸದಸ್ಯರಾದ ಚನ್ನಕೃಷ್ಣ, ನಾರಾಯಣಸ್ವಾಮಿ, ಶಂಕರಪ್ಪ, ಮಧುಸೂದನ್, ಅಬ್ದುಲ್ ಗಫೂರ್, ಸುಮೀರ್, ಮುಂತಾದವರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement