ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ಮಶಾನ ಭೂಮಿ ಮಂಜೂರಿಗೆ ಪ್ರದರ್ಶನ

Rashmi Kasaragodu
Updated On : 25 Mar 2014, 1:36 am

ಕೋಲಾರ: ತಾಲೂಕಿನ ಹೊನ್ನೇನಹಳ್ಳಿಯಲ್ಲಿ ಸ್ಮಶಾನಕ್ಕಾಗಿ ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಲು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಹೊನ್ನೇನಹಳ್ಳಿ ಗ್ರಾಮದಲ್ಲಿ ಪ್ರಸ್ತುತ ಇರುವ ಸ್ಮಶಾನವು ತುಂಬಾ ಚಿಕ್ಕದಾಗಿದ್ದು, ಗ್ರಾಮದಲ್ಲಿ ಎಲ್ಲ ಜಾತಿಗೆ ಸೇರಿದ ಸುಮಾರು 1500ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿಯವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹೆಚ್ಚಿನ ಜಾಗವನ್ನು ಮಂಜೂರು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮದಲ್ಲಿ ಪ್ರಸ್ತುತ ಇರುವ ಸ್ಮಶಾನವು ಕೇವಲ ನಾಲ್ಕು ಗುಂಟೆ ಜಮೀನಿದ್ದು, ಯಾರಾದರೂ ಸತ್ತರೇ ಹೂಳಲು ಜಾಗವಿಲ್ಲದೇ ಪರದಾಡುವಂತಾಗಿದೆ ಎಂದು ದೂರಿದರು.
ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ.36ರಲ್ಲಿ ಜಮೀನು 10.35 ಎಕರೆ ಗೋಮಾಳ ಜಮೀನಿದ್ದು, ಈ ಜಮೀನಿನಲ್ಲಿ ವಿವಿಧ ಉದ್ದೇಶಗಳಿಗೆ 3 ಎಕರೆ ಜಮೀನನ್ನು ಬಳಸಿಕೊಳ್ಳಲಾಗಿದ್ದು, ಇನ್ನು 7.28 ಎಕರೆ ಜಮೀನು ಉಳಿದಿದೆ.ಈ ಜಮೀನಿನಲ್ಲಿ 2 ಎಕರೆ ಜಮೀನನ್ನು ಸ್ಮಶಾನಕ್ಕೆ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು. ಗಾಂಧಿನಗರ ನಾರಾಯಣಸ್ವಾಮಿ, ಯಲ್ಲಪ್ಪ, ಸುಬ್ರಮಣಿ, ವೆಂಕಟೇಶಪ್ಪ, ರಾಮಪ್ಪ, ಚಂದ್ರಪ್ಪ, ನಲ್ಲಪ್ಪ, ಕೃಷ್ಣಪ್ಪ, ಎಚ್.ಬಿ. ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement