ಇತಿಹಾಸ ಬದಲಾಯಿಸುವ ಕಾಲ ಬಂದಿದೆ
ಮಾಲೂರು: ಕ್ಷೇತ್ರ ಅಭಿವೃದ್ಧಿಯನ್ನೇ ಕಾಣದ 30 ವರ್ಷದ ಇತಿಹಾಸ ಬದಲಾಯಿಸುವ ಕಾಲ ಬಂದಿದ್ದು, ಕ್ಷೇತ್ರದ ಜನತೆ ಕಾಂಗ್ರೆಸ್ ತಿರಸ್ಕರಿಸಿ ಜೆಡಿಎಸ್ ಬೆಂಬಲಿಸಬೇಕೆಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ತಾಲೂಕಿನ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಚುನಾವಣೆ ಪ್ರಚಾರ ಸಭೆಗೆ ಚಾಲನೆ ನೀಡಿ, ನಂತರ ಲಕ್ಕೂರುನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಳೆದ ಮೂವತ್ತು ವರ್ಷದಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಕೆ.ಎಚ್. ಮುನಿಯಪ್ಪರ ಸಾಧನೆ ಶೂನ್ಯ. ಭ್ರಷ್ಟಾಚಾರ ವಿರೋಧಿಸುತ್ತೇವೆ ಎನ್ನುವ ಕಾಂಗ್ರೆಸ್ ಕೃಷ್ಣಯ್ಯ ಶೆಟ್ಟಿ ಎಂಬ ಭ್ರಷ್ಟಾಚಾರಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದರು.
ಲೋಕಸಭೆ ಅಭ್ಯರ್ಥಿ ಕೇಶವ ಮಾತನಾಡಿ, ಜೆಡಿಎಸ್ ವಿರುದ್ಧ 6 ನೀತಿ ಸಂಹಿತೆ ಪ್ರಕರಣ ದಾಖಲಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಒಂದು ಪ್ರಕರಣ ದಾಖಲಾಗದಿರುವುದು ಅಶ್ಚರ್ಯ ತಂದಿದೆ ಎಂದರು. ನಂಜೇಗೌಡ, ಮುನಿರಾಜು ಮಾತನಾಡಿದರು. ಕಾಂಗ್ರೆಸ್ನ, ಬಿಜೆಪಿ ಸೇರಿದಂತೆ 25 ಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಸೇರಿದರು.