ಕೋಟಿಗಾನಹಳ್ಳಿ ರಾಮಯ್ಯ ನಾಮಪತ್ರ
ಕೋಲಾರ: ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಆದಿಮ ಸಂಸ್ಥೆಯ ಮುಖ್ಯಸ್ಥ ಕೋಟಿಗಾನಹಳ್ಳಿ ರಾಮಯ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮಂಗಳವಾರ ಆಮ್ ಆದ್ಮಿ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು, ಎಎಪಿ ಕಾರ್ಯಕರ್ತರು ಎಂ.ಜಿ.ರಸ್ತೆಯಲ್ಲಿ ಸಾಂಕೇತಿಕವಾಗಿ ಪೊರಕೆ ಹಿಡಿದು ಕಸಗೂಡಿಸಿದರು. ಹೋರಾಟದ ಹಾಡುಗಳು, ಡೊಳ್ಳು ಕುಣಿತ ಮೆರವಣಿಗೆಯ ಆಕರ್ಷಣೆಯಾಗಿತ್ತು.
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕೋಟಿಗಾನಹಳ್ಳಿ ಪರವಾಗಿ ಸೂಚಕರಾಗಿದ್ದವರ ವಿವರಗಳು ಸರಿಯಾಗಿ ನಮೋದನೆ ಆಗಿರಲಿಲ್ಲವಾದ್ದರಿಂದ ಚುನಾವಣಾಧಿಕಾರಿ ಡಿ.ಕೆ. ರವಿ ಅವರು ಸರಿಯಾದ ವಿವರಗಳೊಂದಿಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸಿದರು. ಎಎಪಿ ಮುಖಂಡರು ತಕ್ಷಣ ಗೊಂದಲ ನಿವಾರಣೆ ಮಾಡಿ ನಾಮಪತ್ರ ಸಲ್ಲಿಕೆಗೆ ಸಹಕಾರ ನೀಡಿದರು.
ಪ್ರಶಾಂತ, ಬಾಷಾ ಸಾಹೀದ್,ಹಸ್ಮುಖ್ ಜೈನ್, ಶಿವಾರೆಡ್ಡಿ, ಮಂಜುಳ ಇದ್ದರು. ಪಕ್ಷೇತರರಾಗಿ ಕೇಶವ ಎಂಬುವರು ನಾಮಪತ್ರ ಸಲ್ಲಿಸಿದರು.