ಡಿವಿಜಿ ಮಹಾನ್ ಚಿಂತಕ: ಶ್ರೀರಾಮ್
ಮುಳಬಾಗಲು: ಡಾ. ಡಿ.ವಿ. ಗುಂಡಪ್ಪ ಮಹಾನ್ ಚಿಂತಕರು. ಅವರು ಸಾಹಿತ್ಯದ ಮೂಲಕ ಸಮಾಜಕ್ಕೆ ಅವರು ಅಮೂಲ್ಯವಾದ ಕಾಣಿಕೆಯನ್ನು ನೀಡಿದ್ದಾರೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶ್ರೀರಾಮ್ ಹೇಳಿದರು.
ಪಟ್ಟಣದ ಸರ್ಕಾರಿ ಕನ್ನಡ ಡಿವಿಜಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿಗಳ ಅಭಿಮಾನದ ಸವಿನೆನಪಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಡಿವಿಜಿ ಹುಟ್ಟಿ ಬೆಳೆದ ಮನೆಯನ್ನು ಶಾಲೆಗೆ ಅವರು ದೇಣೆಗೆಯಾಗಿ ನೀಡಿದರು. ಪಟ್ಟಣದ ಮಧ್ಯ ಭಾಗದಲ್ಲಿರುವ ಶಾಲೆ ಇಂದು ಕೋಟ್ಟಂತರ ರುಪಾಯಿಗಳ ಬೆಲೆ ಬಾಳುತ್ತದೆ. ಡಿವಿಜಿ ದಾನವಾಗಿ ಸರ್ಕಾರಿ ಶಾಲೆಗೆ ನೀಡಿದ ಮನೆಯನ್ನು ಶಾಲೆಯಾಗಿ ಮಾರ್ಪಾಟು ಮಾಡಿದರು. ಆದರೆ, ಈಗ ಶಾಲೆಯ ಅಭಿವೃದ್ದಿ ಮಾಡದೆ ಕಡೆಗಣಿಸಲಾಗಿದೆ ಎಂದು ಅವರು ದೂರಿದರು.
ಶಿಕ್ಷಣ ಸಂಯೋಜಕ ವಿ.ವೆಂಕಟೇಶ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ವೆಂಕಟಗಿರಿಯಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮು.ಕೃ. ಪದ್ಮನಾಭರಾವ್, ಮಾಜಿ ಅಧ್ಯಕ್ಷ ಕನ್ನಡ ಭಟ ವೆಂಕಟಪ್ಪ, ಚಾಂದ್ ಪಾಷ, ಹಳೆ ವಿದ್ಯಾರ್ಥಿಗಳಾದ ಎಂ.ಜಿ. ಅಮರೇಶ್, ಎನ್. ಅಮರೇಶ್, ಎಸ್. ಅನಂತಕುಮಾರ್, ಎ.ಎಲ್. ಗೋಪಾಲಾಚಾರ್, ಜಿ.ವಿ. ಕುಬೇರ, ಮುನಿವೆಂಕಟಪ್ಪ, ಎಚ್. ನಾಗೇಶ್, ಸರ್ಕಾರಿ ನೌಕರರ ಒಕ್ಕೂಟ ಸಂಘದ ರಾಜ್ಯ ಕಾರ್ಯದರ್ಶಿ ಅಶೋಕ್, ಶಿಕ್ಷಕರಾದ ಸೊಣ್ಣಪ್ಪ, ಓಬಳರೆಡ್ಡಿ, ಕೆ.ಪದ್ಮಾವತಿ, ಸರಸ್ಪತಿ, ಶಾರದಾ ಮುಂತಾದವರು ಭಾಗವಹಿಸಿದ್ದರು. ಈಚೆಗೆ ನಿವೃತ್ತರಾದ ಪದ್ಮವತಮ್ಮ ಅವರನ್ನು ಸನ್ಮಾನಿಸಲಾಯಿತು.