ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪತ್ನಿಗೇ ಬೆಂಕಿ ಹಚ್ಚಿ ಕೊಂದ ದುರುಳ ಪತಿ

Rashmi Kasaragodu
Updated On : 26 Mar 2014, 1:20 am

ಡಿ.ಪಾಳ್ಯದಲ್ಲಿ ನಡೆದ ಘಟನೆ


ಗೌರಿಬಿದನೂರು: ದುರುಳ ಪತಿಯೊಬ್ಬ ತನ್ನ ಹೆಂಡತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಡಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಕೊಲೆಯಾದ ಪತ್ನಿ ಸುನೀತಾಗೆ ತವರುಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಕುಡಿದು ಬಂದ ಚಂದ್ರಶೇಖರ್ 28 ವರ್ಷದ ಸುನೀತಾಗೆ ಬೆಂಕಿ ಹಚ್ಚಿದ್ದಾನೆ. ಅರೆಜೀವ ಸ್ಥಿತಿಯಲ್ಲಿದ್ದ ಆಕೆಯನ್ನು ಗೌರಿಬಿದನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನೀತಾ ಮೃತಪುಟ್ಟಿದ್ದಾಳೆ. ಈ ಸಂಬಂಧ ಮಂಚೇನ್‌ಹಳ್ಳಿ ಠಾಣೆಯ ಪೋಲಿಸರು ಆರೋಪಿ ಚಂದ್ರಶೇಖರ್‌ನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement