ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪತ್ರಕರ್ತ ಮುರಳಿಗೆ ಮಾತೃ ವಿಯೋಗ

Rashmi Kasaragodu
Updated On : 26 Mar 2014, 1:22 am

ಚಿಕ್ಕಬಳ್ಳಾಪುರ: ವಿಜಯ ಧ್ವನಿ ಪತ್ರಿಕೆಯ ವರದಿಗಾರ ಎನ್. ಮುರಳಿರವರ ತಾಯಿ ಜೀವಮ್ಮ (47)ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಮೃತರನ್ನು ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರಿಗೆ ಪತಿ ಮತ್ತು ಪತ್ರಕರ್ತ ಎನ್. ಮುರಳಿ ಸೇರಿದಂತೆ ಇಬ್ಬರು ಪುತ್ರರು ಹಾಗು ಮೂವರು ಪುತ್ರಿಯರು ಇದ್ದಾರೆ. ಇವರ ಅಂತ್ಯ ಕ್ರಿಯೆ ಮಂಗಳವಾರ ಸಂಜೆ ನಗರದ ಸಿಎಸ್‌ಐ ಕ್ರೈಸ್ತರ ರುದ್ರಭೂಮಿಯಲ್ಲಿ ನೆರವೇರಿತು.
ಬಾಲಕಿ ಆತ್ಮಹತ್ಯೆ ಯತ್ನ
ಕೆಜಿಎಫ್: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಶಾಲಾ ಬಾಲಕಿಯೊಬ್ಬಳು ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಬರ್ಟ್‌ಸನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ರಾಜಮಾಣಿಕ್ಯಂ ಎಂಬುವರ ಪುತ್ರಿ ಕುಮಾರಿ(12) (ಹೆಸರು ಬದಲಾಯಿಸಲಾಗಿದೆ) ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡಿದ್ದು ಮನೆಗೆ ಬಂದು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸಂಬಂಧಿಕರು ಬಾಲಕಿಯನ್ನು ಬೆಂಕಿಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ರಾಬರ್ಟ್‌ಸನ್‌ಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಪತಹಸೀಲ್ದಾರ್
ನಿರ್ಲಕ್ಷ್ಯ: ಆರೋಪ
ಟೇಕಲ್: ಮಾಲೂರು ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಅದಾಲತ್ ಕಾರ್ಯಕ್ರಮದಲ್ಲಿ ಖುದ್ದು ಆದೇಶಿಸಿದ ಕಡತಗಳನ್ನು ಮಾಲೂರಿನ ತಹಸೀಲ್ದಾರ್ ಕಚೇರಿಗೆ ಕಳುಹಿಸದೆ ವಿಳಂಬ ಧೋರಣೆ ಮಾಡುತ್ತಿದ್ದಾರೆಂದು ರೈತ ಮುಖಂಡರು ಆರೋಪಿಸಿದ್ದಾರೆ. ಟೇಕಲ್ ಹೋಬಳಿಯಲ್ಲಿ ಕಂದಾಯ ಅದಾಲತ್ ನಡೆದು ಸುಮಾರು ಮೂರು ತಿಂಗಳು ಕಳೆದರೂ ಅದಾಲತ್‌ನಲ್ಲಿ ನಮೂದಾದ ರೈತರ ಖಾತೆ, ಪಹಣಿ ತಿದ್ದುಪಡಿ, ಇತರೆ ದಾಖಲೆಗಳು ಬರದೆ ಜನತೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ತಹಸೀಲ್ದಾರ್ ಅವರೆ ಸ್ವತಃ ಸಹಿ ಹಾಕಿದ ಮೇಲೆ ಅದನ್ನು ಯಾವುದೇ ಕಾರಣಕ್ಕೂ ತಡೆಹಿಡಿಯದೆ ಕಳುಹಿಸಿ ಕಂಪ್ಯೂಟರ್ ವಿಭಾಗಕ್ಕೆ ಸೇರಿಸಬೇಕಾಗಿತ್ತು. ಆದರೆ ಟೇಕಲ್ ಉಪತಹಸೀಲ್ದಾರ್ ಶ್ರೀಧರ್ ಅವರು ನಿರ್ಲಕ್ಷ್ಯ ತೋರಿದ್ದಾರೆಂದು ರೈತರು ಆರೋಪಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಅವರು ಖುದ್ದು ಟೇಕಲ್ ನಾಡಕಚೇರಿಗೆ ಭೇಟಿ ನೀಡಿ ಕಂದಾಯ ಅದಾಲತ್‌ನಲ್ಲಿ ಆದ ಕಡತಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement