ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಮೊಯ್ಲಿ ಟೀಕಿಸುವ ಹಕ್ಕು ಬಿಜೆಪಿಗಿಲ್ಲ'

Rashmi Kasaragodu
Updated On : 26 Mar 2014, 1:19 am

ಗೌರಿಬಿದನೂರು: ವೀರಪ್ಪ ಮೊಯ್ಲಿ ಅವರನ್ನು ಟೀಕಿಸುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮೊಯ್ಲಿ ಅವರು ತಮ್ಮ ಸಂಸದರ ನಿಧಿಯಿಂದ ತಾಲೂಕಿನ ಕೋಟ್ಯಂತರ ರುಪಾಯಿ ಬಳಸಿದ್ದಾರೆ. ವಿದುರಾಶ್ವತ್ಥಕ್ಕೆ ಸುಮಾರು 4 ಕೋಟಿ ವೆಚ್ಚದಲ್ಲಿ ಸ್ವಾತಂತ್ರ ಉದ್ಯಾನವನ ನಿರ್ಮಿಸಿಕೊಟ್ಟಿದ್ದಾರೆ. ಎತ್ತಿನಹೊಳೆಯಿಂದ ಕುಡಿಯುವ ನೀರು ತರುವ ಯೋಜನೆಗೆ ಅವರೇ ಸ್ಫೂರ್ತಿ. ಆದರೆ, ಕ್ಷೇತ್ರದಲ್ಲಿ ಬಿ.ಜೆ.ಪಿಯವರ ಕೊಡುಗೆ ಏನೆಂಬುದು ಆ ಪಕ್ಷದ ನಾಯಕರು ತಿಳಿಸಬೇಕೆಂದು ನಾಯಕ ಜಿ.ಕೆ.ಸತೀಶ್‌ಕಮಾರ್ ಪ್ರಶ್ನಿಸಿದರು.


ದಾಖಲೆಗಳಿಲ್ಲದ 32 ಸೀರೆ ವಶ
ಕೆಜಿಎಫ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಆಟೋದಲ್ಲಿ ಸಾಗಿಸುತ್ತಿದ್ದ 32 ಸೀರೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೇತಮಂಗಲ-ಸುಂದರಪಾಳ್ಯ ಮುಖ್ಯ ರಸ್ತೆ ಗುಟ್ಟಹಳ್ಳಿ ಕ್ರಾಸ್ ಬಳಿ ಅಧಿಕಾರಿ ಟಿ.ಜೆ. ಶಂಕರಮೂರ್ತಿ ಕರ್ತವ್ಯದಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಆಟೋ ತಡೆದು ವಿಚಾರಿಸಿದಾಗ 32 ಸೀರೆ ಪತ್ತೆಯಾಗಿದ್ದು, ಮಾಹಿತಿ ಇಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ. ಕುಮಾರ್ ಮತ್ತು ಜೈರಾಮ್ ಅವರನ್ನು ಬಂಧಿಸಿ ಆಟೋ ಹಾಗೂ 15 ಸಾವಿರ ಬೆಲೆ ಬಾಳುವ 32 ಸೀರೆ ವಶಪಡಿಸಿಕೊಂಡು ಬೇತಮಂಗಲ ಠಾಣೆಗೆ ಹಾಜರು ಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement