ಅಂಗಡಿ ಬೀಗ ಮುರಿದು ಕಳವು
ಬಂಗಾರಪೇಟೆ: ಒಂದೇ ರಾತ್ರಿ ಕಳ್ಳರು ಎರಡು ಅಂಗಡಿಗಳ ಬೀಗ ಮುರಿದು ನಗದನ್ನು ಕಳವು ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪಟ್ಟಣದ ತಾಪಂ ಕಚೇರಿ ಮುಂಬಾಗದ ಇನಾಯತ್ ಎಂಬುವರ ಚಿಲ್ಲರೆ ಅಂಗಡಿಯ ಬೀಗ ಮುರಿದು ಒಳಗಿದ್ದ 15ಸಾವಿರ ನಗದು ದೋಚಿದ್ದಾರೆ. ಇದರ ಪಕ್ಕದಲ್ಲೇ ಇರುವ ನಂದಿನಿ ಹಾಲಿನ ಕೇಂದ್ರದ ಶಲ್ಟರ್ ಮುರಿದು ಒಳಗಿದ್ದ 2ಸಾವಿರ ಮೌಲ್ಯದ ನಂದಿನ ಉತ್ಪನ್ನಗಳನ್ನು ದೋಚಿದ್ದಾರೆ. ಬುಧವಾರ ಅಂಗಡಿ ಮಾಲೀಕರು ಅಂಗಡಿ ಬಾಗಿಲು ತೆರೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಬೈಕ್ ಸವಾರಿರಬ್ಬರ ಸಾವು
ಟೇಕಲ್: ಬೈಕ್ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಮ್ಮನಹಳ್ಳಿ ಬಳಿ ಬುಧುವಾರ ಮಧ್ಯಾಹ್ನ ನಡೆದಿದೆ. ಸ್ಥಳದಲ್ಲೇ ಮೃತ ಸವಾರನನ್ನು ಮಾಲೂರು ಪಟ್ಟಣದ ಪಟಾಲಮ್ಮ ಬಡಾವಣೆ ನಿವಾಸಿ ಬೃಂದಾವನ್(30) ಎಂದು ಗುರುತಿಸಲಾಗಿದೆ. ಬೈಕ್ ಹಿಂದೆ ಕುಳಿತಿದ್ದ ಜಿನಗತಿಮ್ಮನಹಳ್ಳಿ ನಿವಾಸಿ ಮುನಿಶಾಮ(35) ತೀವ್ರವಾಗಿ ಗಾಯಗೊಂಡಿದ್ದು, ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾಸ್ತಿ ಪೋಲಿಸರು ಕೇಸು ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.