ಎಚ್ಡಿಕೆಗಿಂತ ಪತ್ನಿಯೇ ಶ್ರೀಮಂತೆ!
ಚಿಕ್ಕಬಳ್ಳಾಪುರ: ಪತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗಿಂತ ಪತ್ನಿ ಅನಿತಾ ಕುಮಾರಸ್ವಾಮಿಯೇ ಹೆಚ್ಚು ಆಸ್ತಿ ಹೊಂದಿದವರು. ಅನಿತಾ ಕುಮಾರಸ್ವಾಮಿ ರು. 1 07 ಕೋಟಿ ಚರಾಸ್ತಿ ಮತ್ತು ರು. 12 ಕೋಟಿ ಮೌಲ್ಯದ ಸ್ಥಿರಾಸ್ತಿ, ಕುಮಾರಸ್ವಾಮಿ ರು. 2 ಕೋಟಿ, ಚರಾಸ್ತಿ ಮತ್ತು ರು. 2.20 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಆದಾಯ ತೆರಿಗೆ ಇಲಾಖೆ ಮುಂದೆ ಪತ್ನಿ ಅನಿತಾ 2012-13 ರಲ್ಲಿ 1 ಕೋಟಿ ರಆದಾಯ ಮತ್ತು ಕುಮಾರಸ್ವಾಮಿ ವ್ಯವಸಾಯೇತರ ಆದಾಯ 6.80 ಲಕ್ಷ ಮತ್ತು ವ್ಯವಸಾಯದ ಆದಾಯ 1 ಕೋಟಿ ಎಂದು ತೋರಿಸಿದ್ದಾರೆ. ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ಸೆಕ್ಷನ್ 200 ಪಿಸಿ ಕಾಯ್ದೆ ವಿಚಾರಣೆ ಎದುರಿಸುತ್ತಿದ್ದಾರೆ. ಕೈಯಲ್ಲಿ ರು. 14,79,907 ಮತ್ತು ಬ್ಯಾಂಕಿನಲ್ಲಿ ರು. 3,60,822, ಠೇವಣಿ, 1,77,03,000, 50 ಸಾವಿರ ವಿಮೆ, ರು. 21 ಲಕ್ಷ ವೈಯಕ್ತಿಕ ಸಾಲ ನೀಡಿಕೆ, ರು. 25 ಲಕ್ಷ ಮೌಲ್ಯದ ಆಭರಣ ಸೇರಿದಂತೆ ರು. 2,56,96,466 ಚರಾಸ್ತಿ ಹೊಂದಿದ್ದಾರೆ. ರು. 2.20 ಕೋಟಿ ಮೌಲ್ಯದ ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇವರ ಪತ್ನಿ ಅನಿತಾ ಕುಮಾರಸ್ವಾಮಿ, ಕೈಯಲ್ಲಿ ರು. 40.72 ಲಕ್ಷ ಮತ್ತು ಬ್ಯಾಂಕಿನಲ್ಲಿ ರು. 8,42,66,445 ಬ್ಯಾಂಕಿನಲ್ಲಿ, ಠೇವಣಿ ರು. 1,02,95,82,308, ರು. 11,34,93,146 ಸಾಲ ನೀಡಿಕೆ, ರು. 49.27 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ರು. 107.80 ಕೋಟಿ ಚರಾಸ್ತಿಯನ್ನು ಹೊಂದಿದ್ದು ರು. 12.97 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ.
ಕುಮಾರಸ್ವಾಮಿ ಬ್ಯಾಂಕಿನಿಂದ ರು. 2.15 ಕೋಟಿ ಸಾಲವನ್ನು, ಅನಿತಾ ಸರ್ಕಾರ ರು. 72.86 ಲಕ್ಷ ಮತ್ತು ಬ್ಯಾಂಕಿನಿಂದ ರು. 65.99 ಕೋಟಿ ಸಾಲವನ್ನು ಪಡೆದುಕೊಂಡಿದ್ದಾರೆ.