ಕಡೇ ದಿನ 21 ನಾಮಪತ್ರ
ಕೋಲಾರ: ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಕಡೇ ದಿನವಾದ ಬುಧವಾರ ಒಟ್ಟು 21 ಅಭ್ಯರ್ಥಿಗಳು ಒಟ್ಟು 28 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಾರಂಭವಾದಾಗಿನಿಂದ ಕಡೇ ದಿನದವರೆಗೂ ಒಟ್ಟು 33 ಅಭ್ಯರ್ಥಿಗಳು 46 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.
ಬುಧವಾರ ವಿನಾಯಕ ಪ್ರಸಾದ್ ಪಕ್ಷೇತರ, ಹೆಚ್.ಎನ್. ನಾರಾಯಣಸ್ವಾಮಿ- ಪಕ್ಷೇತರ, ಎಸ್. ಮುನಿಯಪ್ಪ-ಪಕ್ಷೇತರ, ಎನ್. ವೆಂಕಟೇಶ್ ಪಕ್ಷೇತರ, ಎಸ್.ಪಿ. ಲಕ್ಷ್ಮಿನಾರಾಯಣ ಪಕ್ಷೇತರ, ಎಸ್.ಬಿ. ಮುನಿವೆಂಕಟಪ್ಪ-ಜೆ.ಡಿ.ಎಸ್, ನಾರಾಯಣಸ್ವಾಮಿ-ಪಕ್ಷೇತರ, ಅಂಜಪ್ಪ-ಪಕ್ಷೇತರ, ಜಿ.ಎನ್. ವೆಂಕಟೇಶ್ ಪಕ್ಷೇತರ, ಆರ್. ಪ್ರತಾಪ್ ಪಕ್ಷೇತರ, ಆರ್. ರವೀಂದ್ರಕುಮಾರ್ ಪಕ್ಷೇತರ, ಬಿ. ಶ್ರೀನಿವಾಸ-ಪಕ್ಷೇತರ, ಬಿ.ವಿ. ವೆಂಕಟಗಿರಿಯಪ್ಪ-ಪಕ್ಷೇತರ, ಕೆ.ಸಿ. ವಿಜಯಕುಮಾರ್ ಪಕ್ಷೇತರ, ವಿ.ಗಣೇಶ್ ಜೆ.ಡಿ.ಎಸ್., ಹನು
ಮಪ್ಪ-ಪಕ್ಷೇತರ, ಮುನಿಯಪ್ಪ-ಪಕ್ಷೇತರ, ಡಿ.ಎಂ.
ಅಂಬರೀಶ-ಬಹುಜನ ಸಮಾಜ ಪಕ್ಷ, ಡಿ. ಮುನೇಶ್ ಪಕ್ಷೇತರ, ಹೆಚ್.ಎಂ. ರಾಮಕೃಷ್ಣ-ಪಕ್ಷೇತರ, ಕೆ.ಹೆಚ್. ಮಧುಸೂದನ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.