ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೃಷ್ಣಯ್ಯ ಶೆಟ್ಟಿ ಪ್ರರಣಗಳು ಸಿರಿಯಸ್ ಅಲ್ಲ: ಸಿಎಂ ಸಿದ್ದರಾಮಯ್ಯ

Rashmi Kasaragodu
Updated On : 27 Mar 2014, 1:03 am

ತುಮಕೂರು: ಮಹಾತ್ಮ ಗಾಂಧಿಯವರನ್ನು ಕೊಂದ ಗೋಡ್ಸೆಗೂ ಆರ್‌ಎಸ್‌ಎಸ್, ಜನಸಂಘ, ಬಿಜೆಪಿಗೂ ಸಂಬಂಧವಿಲ್ಲ ಎಂಬ ವಾದದಲ್ಲಿ ಹುರುಳಿಲ್ಲ. ಗೋಡ್ಸೆ ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಎಂಬುದಕ್ಕೆ ದಾಖಲೆಗಳಿವೆ. ಗೋಡ್ಸೆ ಗಾಂಧಿ ಕೊಂದಿದ್ದರಿಂದಲೇ ಅಂದಿನ ಗೃಹಮಂತ್ರಿ ಸರ್ದಾರ್ ಪಟೇಲ್ ಆರ್‌ಎಸ್‌ಎಸ್‌ನ್ನು ನಿಷೇಧಿಸಿದ್ದು ಎಂಬುದು ಗಮನಾರ್ಹ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾಫರ್ ಷರೀಪ್ ಸ್ವಲ್ಪ ಅಸಮಾಧಾನದಿಂದಿದ್ದಾರೆ. ಕಾಂಗ್ರೆಸ್‌ನಲ್ಲೇ ಉಳಿತಾರೆ. ತಾವು ಗಣಿ, ಭ್ರಷ್ಟಾಚಾರದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದು ನಿಜ. ಬಿಜೆಪಿ ಮುಖಂಡ ಕೃಷ್ಣಯ್ಯಶೆಟ್ಟಿಯವರ ಆರೋಪಗಳು ಅಷ್ಟೇನೂ ಸೀರಿಯಸ್ಸಾಗಿರಲಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿ, ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದೆ ಅಷ್ಟೇ ಎಂದರು.
ಇನ್ನು ಬಿಜೆಪಿಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ. ಬಿಎಸ್‌ಆರ್ ಕಾಂಗ್ರೆಸ್‌ನ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಬಿಜೆಪಿ ಮುಖಂಡ ಅನಂತ್ ಕುಮಾರ್ ಸಂಸತ್‌ನಲ್ಲಿ ಆಧಾರ್ ವಿರುದ್ಧ ಮಾತನಾಡದೇ ಈಗ ಚುನಾವಣೆಯ ವೇಳೆ ಪ್ರಸ್ತಾಪಿಸುತ್ತಿರುವುದು ಅವಕಾಶವಾದಿತನವಲ್ಲದೇ ಮತ್ತೇನಲ್ಲ ಎಂದರು. ತುಮಕೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಸ್ಪರ್ಧಿಸಿದ ಕಾರಣಕ್ಕೆ ಕ್ಷೇತ್ರವನ್ನು ಸೀರಿಯಸ್ಸಾಗಿ ತೆಗೆದುಕೊಂಡು ಇಲ್ಲಿಗೆ ಪ್ರಚಾರಕ್ಕೆ ಬಂದೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement