ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚುಟುಕು ಸಾಹಿತ್ಯದಿಂದ ಸಮಾಜದ ಬದಲಾವಣೆ

Rashmi Kasaragodu
Updated On : 27 Mar 2014, 12:59 pm

ಕ.ಪ್ರ.ವಾರ್ತೆ, ಕೋಲಾರ, ಮಾ.26
ಆಡು ಭಾಷೆಯಲ್ಲಿ ಸರಳವಾಗಿ ಬರೆಯಬಹುದಾದ ಚುಟುಕುಗಳು ಜನಪದ ಮೂಲದಿಂದ ಬಂದಿದ್ದು, ಇಂದಿನ ಸಮಾಜದಲ್ಲಾಗುತ್ತಿರುವ ಬದಲಾವಣೆಯನ್ನು ಎತ್ತಿ ತೋರಿಸುವ ಅಸ್ತ್ರವಾಗಿದೆ. ಇಂತಹ ಚುಟುಕು ಸಾಹಿತ್ಯ ಬರೆಯುವ ಹವ್ಯಾಸವನ್ನು ವಿದ್ಯಾರ್ಥಿ ದಿಸೆಯಿಂದಲೇ ಆರಂಭಿಸಿದರೆ, ಮನಸ್ಸಿನ ಉಲ್ಲಾಸದ ಜೊತೆಗೆ ದೇಶೀಯ ಸಂಸ್ಕೃತಿ ಉಳಿಸಿದಂತಾಗುತ್ತದೆ ಎಂದು ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ವಿ. ನಾಚೇಗೌಡ ತಿಳಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರೋಟರಿ ಸೆಂಟ್ರಲ್ ಸಂಸ್ಥೆ, ತೋಟಗಾರಿಕೆ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಯುಗಾದಿ ಸಂಭ್ರಮ ಕವಿಗೋಷ್ಠಿಯನ್ನು ತೋಟಗಾರಿಕಾ ಸಂಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿ, ಮೊನಚಾದ ಸಾಹಿತ್ಯ ರಚನೆ ಜನಸಾಮಾನ್ಯರ ಮನಸ್ಸನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಇಂತಹ ಸಾಹಿತ್ಯ ರಚನೆಗೆ ಪೂರಕವಾಗಿ ಕವಿಗೋಷ್ಠಿಗಳು ಆಗಬೇಕು ಎಂದರು. ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವ ಆಧುನಿಕತೆಯಲ್ಲಿ ಇಂದೂ ತನ್ನದೇ ಆದ ವಿಶಿಷ್ಟ ಚಾಪನ್ನು ಹೊಂದಿರುವ ಚುಟುಕು ಸಾಹಿತ್ಯ ಸಮಾಜ, ಪರಿಸರ ಮನಸ್ಸುಗಳ ಭಾಂಧವ್ಯ ಹೆಚ್ಚಿಸುತ್ತಿದ್ದು, ಇದರ ಬೆಳವಣಿಗೆಗೆ ಎಲ್ಲರೂ ಶ್ರಮಿಸುವ ಅಗತ್ಯವಿದೆ ಎಂದರು.
 ರೋಟರಿ ಸೆಂಟ್ರಲ್ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಮಾತನಾಡಿ, ಚುಟುಕು ಸಾಹಿತಿಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿದರು. ತೋಟಗಾರಿಕಾ ಮಹಾ ವಿದ್ಯಾಲಯದ ಚುಟುಕು ಕವಿಗಳಾದ ರಮೇಶ್ ಭಟ್, ರಾಕೇಶ್, ಪವಿತ್ರ, ಅಶ್ವಿನಿ, ಸುಶ್ಮ, ಜೋತಿ, ಹರ್ಷಿತ ಸೇರಿದಂತೆ 14 ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ನೆನಪಿನ ಕಾಣಿಕೆ ಪಡೆದುಕೊಂಡ ಸಂದರ್ಭದಲ್ಲಿ ಪರಿಷತ್ ಉಪಾದ್ಯಕ್ಷ ವಿ.ಪಿ. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಪಿ. ನಾರಾಯಣಪ್ಪ, ರೋಟರಿ ಸೆಂಟ್ರಲ್‌ನ ಡಾ. ಚಿದಾನಂದ, ಉಪನ್ಯಾಸಕ ವಾಸುದೇವ್, ಅನಂತ್, ರಾಜೇಜ್, ರಾಮಚಂದ್ರ, ಅಮರ ನಂಜುಂಡೇಶ್ವರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement