ಜನರಿಗೆ ಜೆಡಿಎಸ್ ಅಭ್ಯರ್ಥಿ ಗುರುತಿಸಲು 10 ವರ್ಷ ಬೇಕು: ಕೆ.ಎಚ್. ಮುನಿಯಪ್ಪ
ಚಿಂತಾಮಣಿ: ಕೋಲಾರ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಅವರನ್ನು ಜನರು ಗುರ್ತಿಸಲು ಇನ್ನೂ ಕನಿಷ್ಠ 10 ವರ್ಷ ಬೇಕಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹೇಳಿದರು.
ಬೂರಮಾಕಲಹಳ್ಳಿ ಸಂಜೀವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 'ಆಂಧ್ರದಿಂದ ವಲಸೆ ಬಂದ ರಿಯಲ್ ಎಸ್ಟೇಟ್ ಉದ್ಯಮಿ ಕೇಶವ ಕೋಲಾರ ಮೀಸಲು ಕ್ಷೇತ್ರದಲ್ಲಿ ಅಭ್ಯರ್ಥಿ ಎಂದು ಹಾಗೂ ಜನರ ಮುಂದೆ ಬಣ್ಣ ಬಣ್ಣದ ಮಾತು ಹೇಳಿ ನಾಟಕ ಮಾಡುತ್ತಿದ್ದಾರೆ' ಎಂದು ದೂರಿದರು. ಜನರು ಇವರನ್ನು ಗುರುತಿಸಲು ಇನ್ನೂ 10 ವರ್ಷ ಬೇಕಾಗುತ್ತದೆ. ಕೇಶವ್ ವಿರುದ್ಧ ಹಲವು ಚೆಕ್ಬೌನ್ಸ್ ಪ್ರಕರಣಗಳಿವೆ ಎಂದರು. ಬಿಜೆಪಿ ಅಭ್ಯರ್ಥಿ ಪಕ್ಷದಿಂದ ಪಕ್ಷಕ್ಕೆ ಮಂಗನಂತೆ ಹಾರಿ ಜನರ ದಿಕ್ಕು ತಪ್ಪಿಸುವ ರಾಜಕಾರಣಿಯಾಗಿದ್ದಾರೆ. ಹಾಗಾಗಿ, ಕಾಂಗ್ರೆಸ್ಗೆ ಮತ ನೀಡಿ ಆಶೀರ್ವದಿಸಬೇಕೆಂದು ಕೋರಿದರು.