ಜಿಲ್ಲಾ ಅತ್ಯುತ್ತಮ ಪುರಸ್ಕಾರ
ಮುಳಬಾಗಲು: ಕ್ಷಯ ರೋಗ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮುಳಬಾಗಲು ಸರ್ಕಾರಿ ಆಸ್ಪತ್ರೆಯ ಕ್ಷಯರೋಗ ವಿಭಾಗದ ವೈದ್ಯಾಧಿಕಾರಿ ಡಾ. ಕಾಡೇನಹಳ್ಳಿ ಮನು ಮತ್ತು ಪ್ರಯೋಗಶಾಲೆಯ ಮೇಲ್ವಿಚಾರಕ ಎನ್.ಆರ್. ನಾರಾಯಣಸ್ವಾಮಿ ಅವರಿಗೆ ಜಿಲ್ಲಾ ಅತ್ಯುತ್ತಮ ಪುರಸ್ಕಾರ ಪ್ರಧಾನ ಮಾಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಷಯ ರೋಗ ನಿವಾರಣಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಈ ಗೌರವ ಸಲ್ಲಿಸಲಾಯಿತು. ಜಿಲ್ಲಾ ಶಸ್ತ್ರ ಚಿಕಿತ್ಸಾಕ ಡಾ. ರಮೇಶ್ ಬಾಬು, ನಿವೃತ್ತ ವೈದ್ಯಾಧಿಕಾರಿ ಡಾ. ಕೃಷ್ಣಮೂರ್ತಿ, ಆರ್.ಎಲ್. ಜಾಲಪ್ಪ ವೈದ್ಯಕೀಯ ವಿಭಾಗದ ಡಾ. ರಾಘವೇಂದ್ರ, ಡಾ.ಶ್ರೀರಾಮುಲು, ಡಾ.ಎಂ. ನಾರಾಯಣಸ್ವಾಮಿ ಭಾಗವಹಿಸಿದ್ದರು.