ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಡಿಎಸ್ ಕಾರ್ಯಕರ್ತರಿಗೆ ಅನ್ಯಾಯ ಆರೋಪ

Rashmi Kasaragodu
Updated On : 27 Mar 2014, 1:02 am

ಕೋಲಾರ: ಪಕ್ಷವನ್ನೇ ನಂಬಿ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವ ಕಾರ್ಯಕರ್ತರಿಗೆ ಪಕ್ಷದ ಮುಖಂಡರು ಅನ್ಯಾಯ ಮಾಡುತ್ತಿದ್ದು ಪಕ್ಷದ ನೂತನ ಅಭ್ಯರ್ಥಿಯನ್ನು ನಾವೇ ಗೆಲ್ಲಿಸುತ್ತೇವೆ, ನಾವೇ ಅವರನ್ನು ಲೋಕಸಭೆಗೆ ಕಳುಹಿಸಿಕೊಡುವುದಾಗಿ ಹೇಳಿ ಬೊಗಳೆ ಬಿಟ್ಟು ಅಭ್ಯರ್ಥಿಗಳನ್ನು ಕಾರ್ಯಕರ್ತರಿಗೆ ಪರಿಚಯಿಸದೆ  ಲಾಬಿ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಯುವ ಜಿಲ್ಲಾ ಉಪಾಧ್ಯಕ್ಷ ಕಾಳಸ್ತಿಪುರ ಜಯರಾಂ ಆರೋಪಿಸಿದ್ದಾರೆ.
ಕೋಲಾರ ತಾಲೂಕಿನ ಹುತ್ತೂರು ಹೋಬಳಿ ಕಾರ್ಯಕರ್ತರ ಸಭೆಯಲ್ಲಿ ಅವರು ಪಕ್ಷದಲ್ಲಿ ನಡೆಯುತ್ತಿರುವ ಬದಲಾವಣೆಗಳಿಗೆ ಆಕ್ರೋಶ ವ್ಯಕ್ತಪಡಿಸಿ, ಕಳೆದ 20 ವರ್ಷಗಳಿಂದ ನಿಷ್ಠಾವಂತರಾಗಿ ಯಾವುದೇ ಸ್ಥಾನಮಾನಗಳಿಗೂ ಆಸೆ ಪಡೆಯದೆ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತಿದ್ದು ಪಕ್ಷದ ಮುಖಂಡರ ನಡತೆ ಬೇಸರ ಮೂಡಿಸಿದೆ ಎಂದರು.
ಅಭ್ಯರ್ಥಿ ಕೇಶವ ಅವರು ಸಹ  ಕೆಲ ಮುಖಂಡರನ್ನೇ ಜಿಲ್ಲೆಯ ಪ್ರಮುಖರು ಎಂದು ಭಾವಿಸಿ ಅವರ ಮೇಲೆ ದುಂಬಾಲು ಬೀಳುವುದನ್ನು ಬಿಟ್ಟು ಪಕ್ಷಕ್ಕಾಗಿ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಪರಿಗಣಿಸಬೇಕೆಂದರು.
ಕೇವಲ ಹಣ ಹಾಗೂ ಇತ್ಯಾದಿಗಳೇ ನಮ್ಮ ಉದ್ದೇಶವಲ್ಲ. ಪಕ್ಷ ದಿನೇ ದಿನೇ ಅವನತಿಗೆ ಸಾಗುತ್ತಿರುವುದನ್ನು ನೋಡಲಾರದೆ ಈ ಸಭೆಯನ್ನು ಕರೆಯಲಾಗಿದೆ. ಕೆಲ ಮುಖಂಡರ ಕೈಯಲ್ಲೇ ಇಡೀ ಪಕ್ಷ ಇದೆ ಎಂಬುದು ಸುಳ್ಳು ಕಾರ್ಯಕರ್ತರಿಗೂ ಪೂರಕ ವಾತಾವರಣ ಪಕ್ಷದಲ್ಲಿ ನಿರ್ಮಿಸಿಕೊಡಬೇಕೆಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement