ಮುನಿಯಪ್ಪರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ
ಮಾಲೂರು: ಕಳೆದ ಮೂರು ದಶಕಗಳಿಂದ ಕೋಲಾರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪರವರು ಒಂದೂ ಶಾಶ್ವತ ಕಾಮಾಗಾರಿ ಮಾಡಲು ಸಾಧ್ಯವಿಲ್ಲದಿರುವಾಗ ಇನ್ಯಾವ ಮುಖ ಇಟ್ಟುಕೊಂಡು ಮತ್ತೆ ಆಯ್ಕೆ ಬಯಸಿದ್ದಾರೆ ಎಂದು ಮಾಲೂರು ಶಾಶಕ ಮಂಜುನಾಥ್ ಗೌಡ ಪ್ರಸ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಹೆಮ್ಮೆಗೆ ಕಾರಣವಾಗಿದ್ದ ಚಿನ್ನದಗಣಿ, ರೇಷ್ಮೆ ಹಾಗೂ ನೀರಿಲ್ಲದಿದ್ದರೂ ಯಥೇಚ್ಚವಾಗಿ ಉತ್ಪಾದಿಸುತ್ತಿರುವ ಹಾಲು ಮುಂತಾದವುಗಳಿಗೆ ಮಾರುಕಟ್ಟೆ ಕಲ್ಪಿಸಿಲ್ಲ, ಯುವಕರಿಗೆ ಉದ್ಯೋಗ ಸೃಷ್ಟಿ, ಕೃಷಿಗಾಗಿ ಶಾಶ್ವತ ನೀರಾವರಿ ಯೋಜನೆ ತರಲು ಕಳದೆ 30 ವರ್ಷಗಳಿಂದ ಸಾಧ್ಯವಾಗದ ಕೆ.ಎಚ್. ಮುನಿಯಪ್ಪರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಜೆಡಿಎಸ್ ಅಭ್ಯರ್ಥಿ ಕೇಶವ ರವರಿಗೆ ಜಾತಿ ಪತ್ರ ಸಮಸ್ಯೆ ಸೇರಿದಂತೆ ಕಣ ಬಿಟ್ಟು ಒಡಿಹೋಗುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಇಂತಹ ಅಡೆತಡೆಗಳನ್ನು ಎದುರಿಸಿ ಗೆಲುವು ಸಾಧಿಸಲಿದ್ದಾರೆ ಎಂದರು.
ಭ್ರಷ್ಟಾಚಾರ ವಿರೋಧಿಸುತ್ತೇವೆ ಎಂದು ಬೊಬ್ಬಿರಿಯುವ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿರನ್ನು ಯಾವ ಮಾನದಂಡದ ಮೇಲೆ ಸೇರಿಸಿಕೊಂಡಿದೆ. ಈ ಬಗ್ಗೆ ಕೆ.ಎಚ್. ಮುನಿಯಪ್ಪ ತಿಳಿಸಬೇಕು ಎಂದರು.