ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಪಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್ ಗೆಲ್ಲಿಸಿ

Rashmi Kasaragodu
Updated On : 28 Mar 2014, 2:22 am

ಕೋಲಾರ: ಪರಿಶಿಷ್ಟ ಪಂಗಡಗಳ ಏಳಿಗೆಗಾಗಿ ಶ್ರಮಿಸಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಈ ಬಾರಿಯೂ ಸಂಸದರಾಗಿ ಆಯ್ಕೆ ಮಾಡಲು ಜನಾಂಗದವರು ಮುಂದಾಗಬೇಕೆಂದು ಕೆಪಿಸಿಸಿ ಪರಿಶಿಷ್ಟ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲೂರು ಎನ್. ವೆಂಕಟರಾಮ್ ತಿಳಿಸಿದರು.
ತಾಲೂಕಿನ ನರಸಾಪುರ ಸಮೀಪದ ಖಾಸಗಿ ಹೊಟೇಲ್ನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ವಿಭಾಗದ ಸಭೆಯಲ್ಲಿ ಮಾತನಾಡಿ, ಜನಾಂಗದವರು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸುಧಾರಣೆಯಾಗಲು ಸಂಸದ ಕೆ.ಎಚ್. ಮುನಿಯಪ್ಪ ಅನೇಕ ವಿಧದಲ್ಲಿ ಸಹಕಾರ ನೀಡಿದ್ದಾರೆಂದು ವಿವರಿಸಿದರು. ಈಗಿನ ಚುನಾವಣೆಯಲ್ಲಿ ಅವರನ್ನು 7ನೇ ಬಾರಿಯು ಮರು ಆಯ್ಕೆ ಮಾಡುವ ಮೂಲಕ ಜನಾಂಗದವರು ತಮ್ಮ ಋಣವನ್ನು ತೀರಿಸಿಕೊಳ್ಳುವಂತಾಗಬೇಕು ಅದಕ್ಕಾಗಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವಂತಾಗಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ಜಿಲ್ಲಾಧ್ಯಕ್ಷ ಸುಗುಟೂರು ಎಸ್.ಎಂ. ನಾಗರಾಜ್ ಮಾತನಾಡಿ, ಕೆ.ಎಚ್. ಮುನಿಯಪ್ಪ ಅವರ ಸತತ ಪರಿಶ್ರಮದ ಪರಿಣಾಮ ಜಿಲ್ಲೆಗೆ ಅನೇಕ ಕೈಗಾರಿಕೆಗಳು ಬಂದು ಸಾವಿರಾರು ಮಂದಿಗೆ ಉದ್ಯೋಗ ಲಭಿಸುವುದರೊಂದಿಗೆ ಜಿಲ್ಲೆಯ ಆರ್ಥಿಕ ಪ್ರಗತಿಗೆ ಅವಕಾಶವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್ ಅನಿಲ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀರಾಮಪ್ಪ, ಎಸ್.ಟಿ. ವಿಭಾಗದ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್, ತಿರುಮಲೇಶ್, ಅಧ್ಯಕ್ಷ ವಕ್ಕಲೇರಿ ಬಾಬು, ಬೆಳ್ಳೂರು ಮುನಿರಾಜು, ರಾಮಸಂದ್ರ ರಾಜಣ್ಣ, ಬೆಳ್ಳೂರು ಅಶ್ವಥ್, ವಿಶ್ವನಾಥಪುರ ಸುರೇಶ್, ಮಂಜಲಿ ವೆಂಕಟಪ್ಪ, ಶಿಂಗಳ್ಳಿ ತಿರುಮಲೇಶ್, ಸೀತಿ ಹೊಸೂರು ನರಸಿಂಹಮೂರ್ತಿ, ಸುಗುಟೂರು ಶಂಕರ ಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement