ಎಸ್ಎಸ್ಎಲ್ಸಿ: ಪ್ರಥಮ ಭಾಷೆ ಪರೀಕ್ಷೆ ಯಶಸ್ವಿ
ಮಾಲೂರು: ರಾಜ್ಯದ ಇತರಡೆಯಂತೆ ಮಾಲೂರು ತಾಲೂಕಿನಲ್ಲೂ ಶುಕ್ರವಾರ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು, ಒಟ್ಟು 3003 ವಿಧ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆ ಬರೆದಿದ್ದಾರೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ 3133 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ಅವರಲ್ಲಿ ಶುಕ್ರವಾರ ನಡೆದ ಪ್ರಥಮ ಭಾಷೆಯ ಪರೀಕ್ಷೆಯಲ್ಲಿ 3003 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 130 ವಿದ್ಯಾರ್ಥಿಗಳು ಪರೀಕ್ಷೆಗೆ ಚಕ್ಕರ್ ಹಾಕಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೆಎಸ್ಎಸ್ ಗಾಯಿತ್ರಿ ಶಾಲೆ ಸೇರಿದಂತೆ ಪಟ್ಟಣದಲ್ಲಿ 6 ಹಾಗೂ ತಾಲೂಕಿನ ಇತರಡೆ 4 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದು, ನಕಲಿ ವಿದ್ಯಾರ್ಥಿ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಶಿಕ್ಷಣಾ ಇಲಾಖೆಯ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ.