ಜನರ ಪರ ದನಿ ಎತ್ತಲು ಜೆಡಿಎಸ್ ಅಭ್ಯರ್ಥಿಯಆಶೀರ್ವದಿಸಿ
ಟೇಕಲ್: ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿಲ್ಲ. ಕೇಂದ್ರದಲ್ಲಿ ಜನತೆಯ ಪರ ದನಿ ಎತ್ತಬೇಕಾದರೆ ಜೆಡಿಎಸ್ ಅಭ್ಯರ್ಥಿ ಕೇಶವ ಅವರನ್ನು ಬೆಂಬಲಿಸಬೇಕು ಎಂದು ಶಾಸಕ ಮಂಜುನಾಥಗೌಡ ಹೇಳಿದರು.
ತೊರಲಕ್ಕಿಯಲ್ಲಿ ನೂಟವೆ, ರಾಜೇನಹಳ್ಳಿ ಗ್ರಾಪಂಗಳ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಮಾಲೂರಿನ 'ಮನೆ ಮಗ' ಕೇಶವ್ ಅವರಿಗೆ ಈ ಬಾರಿ ನೀವು ಆಶೀರ್ವಾದ ಮಾಡಬೇಕು ಎಂದು ತಿಳಿಸಿದರು. ಬಳಿಕ ಅಭ್ಯರ್ಥಿ ಕೇಶವ, ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿದರು. ತೊರಲಕ್ಕಿಯಲ್ಲಿ ಜೆಡಿಎಸ್ ಯುವ ಕಾರ್ಯಕರ್ತರಿಂದ ಅಭ್ಯರ್ಥಿ ಕೇಶವ, ಶಾಸಕ ಮಂಜುನಾಥಗೌಡ, ಕೆ.ವೈ.ನಂಜೇಗೌಡರಿಗೆ ಬಾರಿ ಹೂವಿನ ಹಾರ ಹಾಕಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ತೊರಲಕ್ಕಿ, ಹುಳದೇನಹಳ್ಳಿ, ಸಂತೆಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಲಾಯಿತು. ಪ್ರಚಾರದ ಸಮಯದಲ್ಲಿ ಕೆಲವು ಕಡೆ, ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು. ಶಾಸಕ ಮಂಜುನಾಥಗೌಡ ಅವರನ್ನು ಬರಮಾಡಿಕೊಂಡರು.