ಜನರನ್ನು ಮರುಳು ಮಾಡುತ್ತಿರುವ ಬಿಜೆಪಿ
ಬಾಗೇಪಲ್ಲಿ: ದೇಶವನ್ನು ಉಳಿಸಲು ಬಿಜೆಪಿಯನ್ನು ಗೆಲ್ಲಿಸಿ ಎಂದು ಹೇಳುತ್ತಾ, ಜನರನ್ನು ಮರುಳು ಮಾಡುತ್ತಿರುವ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವ ಕನಸು ನನಸಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮತ್ತು ಪಕ್ಷೇತರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗುಜರಾತಿನಲ್ಲಿ ನಡೆದ ಗೋಧ್ರಾ ಹತ್ಯಾ ಘಟನೆಯನ್ನು ದೇಶದ ಜನರು ಎಂದಿಗೂ ಮರೆಯುವುದಿಲ್ಲ. ಬಿಜೆಪಿ ಪಕ್ಷ ಅಧಿಕಾರದಲ್ಲಿರುವಾಗಲೇ ಕೋಮು ಗಲಭೆ ನಡೆದಿದ್ದು, ಇದರಿಂದ ಬಿಜೆಪಿಗೆ ಜನ ಬೆಂಬಲ ಸಿಗುವುದಿಲ್ಲ. ಆದರೂ ಸಹ ಕೇವಲ ದೇಶದಲ್ಲಿ ನರೇಂದ್ರ ಮೋದಿ ಅಲೆ ಇದೆ ಎಂದೆಲ್ಲಾ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದರು. ಜಾತ್ಯತೀತ ತತ್ವಗಳಿಗೆ ಅನುಗುಣವಾಗಿ ಜನಪರ ಆಡಳಿತ ನಡೆಸುವುದು ಕೇವಲ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದರು. ಕಾಂಗ್ರೆಸ್ ಆಡಳಿತಕ್ಕೆ ಬಂದಂತೆ ಯೋಜನೆಗಳನ್ನು ಘೋಷಿಸಿತು. ಅನ್ನಭಾಗ್ಯ ಯೋಜನೆ ಸರ್ಕಾರದ ದೊಡ್ಡ ಸಾಧನೆ. ಇನ್ನೂ ಕ್ಷೀರಭಾಗ್ಯ, ರೈತರ ಸಾಲಮನ್ನಾ ಸೇರಿ ಅನೇಕ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈಗಾಗಲೇ ಆಡಳಿತಕ್ಕೆ ಬರುವ ಮುಂಚೆಯೇ ಜನರಿಗೆ ನೀಡಿದ ಪ್ರಣಾಳಿಕೆಯಲ್ಲಿ ಶೇ.60 ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎಂದರು.
ಕೆ.ಎಚ್.ಮುನಿಯಪ್ಪ ಮತ್ತು ಎಂ.ವೀರಪ್ಪ ಮೊಯ್ಲಿ ಗೆಲುವು ಶತಸಿದ್ಧ ಎಂದರು.