ಜೆಡಿಎಸ್ ಗೆಲ್ಲಿಸಿ: ಶಾಸಕ ಮಂಜುನಾಥಗೌಡ
ಬಂಗಾರಪೇಟೆ: ಈ ಬಾರಿ ಜೆಡಿಎಸ್ನ್ನು ಗೆಲ್ಲಿಸ ಬೇಕು ಎಂದು ಮಾಲೂರು ಶಾಸಕ ಮಂಜುನಾಥಗೌಡ ಕಾರ್ಯಕರ್ತರಿಗೆ ಕರೆ ನೀಡಿದರು. ಪಟ್ಟಣದ ಹೊರವಲಯದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಕಳೆದ 6 ಬಾರಿ ಕೆ.ಹೆಚ್. ಮುನಿಯಪ್ಪ ಜಯಗಳಿಸಿದ್ದರೂ ಕ್ಷೇತ್ರದಲ್ಲಿ ಮಾತ್ರ ಯಾವುದೇ ಬದಲಾವಣೆಯ ಗಾಳಿ ಬೀಸಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಈಗಾಗಲೇ ದೇಶದ ಜನರು ಎರಡು ಪಕ್ಷಗಳ ಆಡಳಿತವನ್ನು ನೋಡಿ ಬೇಸತ್ತಿದ್ದಾರೆ ಎಂದರು. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿದರು. ವೆಂಕಟಶಿವಾರೆಡ್ಡಿ ಶ್ರೀಕೃಷ್ಣ, ಡಿ.ಎಲ್. ನಾಗರಾಜ್ ಸೇರಿ ಇತರರು ಇದ್ದರು.