ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತೆಲುಗು ಚಿತ್ರಕ್ಕೆ ಕುರಿ ಬಲಿ ಕೊಟ್ಟರು

Rashmi Kasaragodu
Updated On : 29 Mar 2014, 2:18 am

ಕೋಲಾರ: ಇದೆಂತಹ ಅಭಿಮಾನ. ಏನಿದು ವಿಚಿತ್ರ...
ಮಾರಮ್ಮ, ಗಂಗಮ್ಮ ಮುಂತಾದ ಶಕ್ತಿ ದೇವತೆಗಳಿಗೆ ಕುರಿ ಕೋಳಿ ಬಲಿ ನೀಡಿ ಹರಿಕೆ ತೀರಿಸುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಈ ಪದ್ಧತಿಯ ಬಗ್ಗೆಯೂ ವಾದ-ವಿವಾದ ಕಾಣಿಸಿಕೊಂಡಿದೆ. ದೇವರರಿಗೆ ಪ್ರಾಣಿಗಳ ಬಲಿ ಕೊಡುವುದು ತಪ್ಪು ಎನ್ನುವುದಾದರೆ ಸಿನಿಮಾ ಸ್ಟಾರ್ಗಳ ಅಭಿಮಾನಿಗಳು ಹೊಸ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಸ್ಟಾರ್, ಕ್ಷೀರಾಭಿಷೇಕ, ಪುಷ್ಪಾರ್ಚನೆ ಬಿಟ್ಟು ಮೂಕ ಪ್ರಾಣಿಗಳನ್ನು ಬಲಿ ಕೊಟ್ಟು ತಮ್ಮ ಅಭಿಮಾನಿ ನಟನಿಗೆ ಶ್ರೇಯಸ್ಸು ಕೋರುವುದು ಎಷ್ಟು ಸರಿ ಹೊಸ ಸಿನಿಮಾ ಬಿಡುಗಡೆಯಾದಾಗ ತಮ್ಮ ಅಭಿಮಾನಿ ನಾಯಕ ನಟನಿಗೆ ಶುಭ ಕೋರಲು ಹತ್ತಾರು ಸ್ಟಾರ್ಗಳನ್ನು ತಯಾರಿಸಿ ಊರ ತುಂಬಾ ಮೆರವಣಿಗೆ ನಡೆಸಿ ಚಿತ್ರ ಪ್ರದರ್ಶನ ಕಾಣುವ ಥಿಯೇಟರ್ ಮುಂದೆ ಅವುಗಳನ್ನು ಕಟ್ಟಿ ಅದಕ್ಕೆ ಅಳೆತ್ತರದ ಹಾರಗಳನ್ನು ಹಾಕಿ ಸಂಭ್ರಮಿಸುವುದು ಹೊಸದೇನು ಅಲ್ಲ. ಅನೇಕ ಕಡೆ ಈಗಲೂ ಅಭಿಮಾನಿಗಳು ತಮ್ಮ ಮೆಚ್ಚಿನ ನಾಯಕ ನಟನ ಹೊಸ ಚಿತ್ರ ಬಿಡುಗಡೆಯಾದಲ್ಲಿ ಕಟೌಟ್ಗಳಿಗೆ ಕ್ಷೀರಾಭಿಷೇಕ ಮಾಡುತ್ತಾರೆ, ಚಿತ್ರ ಮಂದಿರ ಬಳಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸುತ್ತಾರೆ, ಆದರೆ, ಆಂಧ್ರ ಪ್ರದೇಶದ ಜನಪ್ರಿಯ ನಾಯಕ ನಟ ನಂದಮೂರಿ ತಾರಕ ಬಾಲಕೃಷ್ಣರವರಿಗೆ ಅಭಿಮಾನಿಗಳಾಗಿರುವ ಕೋಲಾರದ ಪಡೆಯೊಂದು ಬಾಲಕೃಷ್ಣ ಅಭಿನಯದ ಲೆಜೆಂಡ್ ಚಿತ್ರ ಬಿಡುಗಡೆಗೆ ಶುಭ ಕೋರಿ ಹಾಡು ಹಗಲೇ ಸಾರ್ವಜನಿಕವಾಗಿ ಎರಡು ಕುರಿಗಳನ್ನು ಬಲಿಕೊಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ಇದು ವಿಚಿತ್ರವಾದರೂ ಸತ್ಯ. ಕೋಲಾರದ ಪಲ್ಲವಿ ಚಿತ್ರ ಮಂದಿರದಲ್ಲಿ ಶುಕ್ರವಾರ ಲೆಜೆಂಡ್ ಚಿತ್ರ ಪ್ರದರ್ಶನಗೊಂಡಿದೆ. ಅಭಿಮಾನಿಗಳು ಎರಡು ಕುರಿಗಳನ್ನು ಬಲಿ ನೀಡುವ ಮೂಲಕ ಬಾಲಕೃಷ್ಣರವರಿಗೆ ಶುಭ ಕೋರಿದ್ದಾರೆ. ಕೋಲಾರ ಕರ್ನಾಟಕಕ್ಕೆ ಸೇರಿದ್ದರೂ ಗಡಿ ಭಾಗವಾದ್ದರಿಂದ ಇಲ್ಲಿ ಇಂದಿಗೂ ತೆಲುಗು ಚಿತ್ರಗಳಿಗೆ ಇರುವಷ್ಟು ಬೇಡಿಕೆ ಕನ್ನಡ ಚಿತ್ರಗಳಿಗೆ ಇಲ್ಲದಂತಾಗಿದೆ.
ಕನ್ನಡ ರಾಜ್ಯೋತ್ಸವದಂದು ಮಾತ್ರ ಕನ್ನಡ ಚಿತ್ರಗಳು ಅಬ್ಬಬ್ಬಾ ಎಂದರೆ ಒಂದು ವಾರ ಓಡುತ್ತದೆ, ಕನ್ನಡಪರ ಸಂಘಟನೆಗಳು ಎಷ್ಟೇ ಕುರುಚಾಡಿದರೂ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿಲ್ಲ. ಕನ್ನಡಿಗರೇ ತೆಲುಗು ಚಿತ್ರ ರಂಗದ ಸ್ಟಾರ್ಗಳ ಮೇಲೆ ಅತಿ ಹೆಚ್ಚಿನ ಅಭಿಮಾನ ಹೊಂದಿರುವುದು ಹಾಗೂ ಆರಾಧನೆ ಮಾಡುತ್ತಿರುವುದು ವಿಶೇಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement