ನಾಡ ಕಚೇರಿಗೆ ತಹಸೀಲ್ದಾರ್ ದಿಢೀರ್ ಭೇಟಿ
ಟೇಕಲ್: ಟೇಕಲ್ ನಾಡ ಕಚೇರಿಗೆ ತಹಸೀಲ್ದಾರ್ ಶಿವಕುಮಾರ್ ಅವರು ಶುಕ್ರವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ, ಅಲ್ಲಿನ ಕಡತ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಟೇಕಲ್ನಲ್ಲಿ ಪ್ರತಿಷ್ಠಿತ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ತಿಮ್ಮನಾಯಕನಹಳ್ಳಿ ಅಮಾನಿಅರಸಿಕೆರೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ರಾತ್ರಿ ವೇಳೆ ಪೋಲಿಸ್ಗ್ಸ್ತು ನಿಯೋಜಿಸಲು ತಿಳಿಸಿದರು. ನಾಡಕಚೇರಿಯಲ್ಲಿ ಪಹಣಿ ತೆಗೆದುಕೊಳ್ಳಲು ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಮಾಡಲು ತಿಳಿಸಿದರು. ಕಚೇರಿಯಲ್ಲಿ ತ್ವರಿತಗತಿಯಲ್ಲಿ ಕೆಲಸಗಳು ಸುಗಮವಾಗಿ ನಡೆಯುತ್ತಿದ್ದು, ಇನ್ನು ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವಂತೆ ಸಿಬ್ಬಂದಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್, ಶ್ರೀಧರನ್, ರೆವಿನ್ಯೂ ಅಧಿಕಾರಿ, ಶ್ರೀನಿವಾಸ್, ಪ್ರೇಮಕುಮಾರಿ, ಸಹಾಯಕ ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.