ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಲವಂತದ ಸಾಲ ವಸೂಲಿ ಮುಂದೂಡಿ

Rashmi Kasaragodu
Updated On : 29 Mar 2014, 2:15 am

ಕೋಲಾರ: ಸಾಲ ವಸೂಲಾತಿ ಹೆಸರಿನಲ್ಲಿ ಕೋಳಿ ಸಾಕಾಣೆಗಾರರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೋಳಿ ಸಾಕಾಣೆದಾರರು ಶುಕ್ರವಾರ ನಗರದ ಪ್ರಗತಿ ಗ್ರಾಮೀಣ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಕೋಳಿ ಸಾಕಾಣೆ ಮಾಡಲು ಅನೇಕರು ವಿವಿಧ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಸಾಲ ಮರು ಪಾವತಿಗೆ ನಾವು ಬದ್ಧ. ಆದರೆ, ಸತತ ಬರಗಾಲದಿಂದ ಜೀವನ ಸಾಗಿಸುವುದು ಕಷ್ಟ. ಸಾಲ ತೀರಿಸುತ್ತಿಲ್ಲ ಎಂದು ಬ್ಯಾಂಕುಗಳ ಅಧಿಕಾರಿಗಳು ರೈತರ ಮನೆ ಮುಂದೆ ತಮಟೆ ಬಾರಿಸಿ, ಮನೆಗಳನ್ನು ಜಪ್ತಿ ಮಾಡಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ರೈತರ ಹೆಸರು ಪ್ರಕಟಿಸುವ ಮೂಲಕ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಕೋಳಿ ಸಾಕಾಣೆದಾರರು ಆರೋಪಿಸಿದರು.
ಅನೇಕ ಕಾರಣಗಳಿಂದ ಕೋಳಿಗಳು ಸಾಯುತ್ತಿವೆ. ಮೊಟ್ಟೆ ಉತ್ಪಾದನೆ ಕುಸಿಯುತ್ತಿದೆ. ಇಂಥ ಸಂದರ್ಭದಲ್ಲಿ ರೈತರಿಗೆ ಸಾಲ ಪಾವತಿಗೆ ಗಡುವು ನೀಡುವ ಬದಲು ಮನೆಗಳ ಮುಂದೆ ಬಂದು ಕಿರುಕುಳ ನೀಡುತ್ತಿದ್ದು, ಇದರಿಂದ ರೈತರು ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ಬ್ಯಾಂಕಿನ ಅಧಿಕಾರಿಗಳು ತಕ್ಷಣ ಸಾಲ ವಸೂಲಾತಿ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕೋಳಿ ಸಾಕಾಣೆದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಅಧ್ಯಕ್ಷ ಜಿ.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ಎಂ.ರಮೇಶ್, ಜಿಲ್ಲಾ ಗೌರವಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಜಿಲ್ಲಾಧ್ಯಕ್ಷ ಮುನಿವೆಕಟೇಗೌಡ, ಪ್ರಧಾನ ಕಾರ್ಯದರ್ಶಿ ರಾಮಚಂದ್ರೇಗೌಡ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಜಿಲ್ಲೆಯಲ್ಲಿನ ಕೋಳಿ ಸಾಕಾಣೆದಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement