ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ತಾಲೂಕಿನಲ್ಲಿ ಮೊದಲ ಹಂತ ಪ್ರಚಾರ ಯಶಸ್ವಿ: ಮುನಿರಾಜು

Rashmi Kasaragodu
Updated On : 29 Mar 2014, 2:14 am

ಮಾಲೂರು: ಮುಖಂಡ ಚೆನ್ನಕೇಶವ ಅವರ ನೇತೃತ್ವದಲ್ಲಿ ತಾಲೂಕಿನ 28 ಗ್ರಾಪಂಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರವಾಗಿ ಮೊದಲ ಹಂತದ ಪ್ರಚಾರವನ್ನು ಪೂರ್ಣಗೊಳಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು ತಿಳಿಸಿದ್ದಾರೆ.
ಪಟ್ಟಣದಲ್ಲಿ ಬಿಜೆಪಿ ತೊರೆದು ಬಂದ ಪುರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಯ್ಯ ಹಾಗೂ ಹೋಟೆಲ್ ವೆಂಕಟೇಶ್ ರವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, 'ಮುನಿಯಪ್ಪ ಅವರು ಕಳೆದ 6 ಬಾರಿ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ತೋರಿರುವ ಕಾಳಜಿ ಹಾಗೂ ಜನಪರ ಕಾರ್ಯಕ್ರಮಗಳಿಗೆ ತಲೆ ಬಾಗಿ ತಾಲೂಕಿನ ಬಿಜೆಪಿ-ಜೆಡಿಎಸ್ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖಂಡರು ಪಕ್ಷಕ್ಕೆ ಬರಲಿದ್ದಾರೆ' ಎಂದರು. ಮುಖಂಡ ಚೆನ್ನಕೇಶವ ಮಾತನಾಡಿ, 'ತಾಲೂಕಿನಲ್ಲಿ ಕಾಂಗ್ರೆಸ್ ಹವಾ ಬೀಸುತ್ತಿದ್ದು, ಕಳದೆ ಬಾರಿಕ್ಕಿಂತ ಹತ್ತು ಪಟ್ಟು ಹೆಚ್ಚು ಮತಗಳನ್ನು ಪಡೆಯಲಿದ್ದೇವೆ' ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಲಕ್ಷ್ಮಣಯ್ಯ, ಹೊಟೇಲ್ ವೆಂಕಟಸ್ವಾಮಿ, ಕೋಳಿ ಮುನಿಸ್ವಾಮಿ, ಎಂ.ಬಿ.ಶ್ರೀನಿವಾಸ್, ಗಾಂಧಿ ಸರ್ಕಲ್ ಬಾಬು ಸೇರಿದಂತೆ ಹಲವು ಮುಖಂಡರನ್ನು ಚೆನ್ನಕೇಶವ ಅವರು ಕಾಂಗ್ರೆಸ್ಗೆ ಬರಮಾಡಿಕೊಂಡರು. ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆನ್ನರಾಯಪ್ಪ, ವೈ.ನಾರಾಯಣ್, ರಘುನಾಥ್, ಲಕ್ಷ್ಮಿನಾರಾಯಣ್, ಸಿ.ಪಿ.ವೆಂಕಟೇಶ್, ಸೋಮಣ್ಣ, ಪಾಪರೆಡ್ಡಿ, ಪ್ರವೀಣ್ಕುಮಾರ್, ಗುಂಡಪ್ಪ, ಜಿ.ವಿ.ಕುಮಾರ್, ಈಶ್ವರ್, ಸಂಪತ್ತು, ಮಧುಸೂದನ್ ಸೇರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement