ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪ ಸೋಲಿಸಲು ಶ್ರೀನಿವಾಸಗೌಡ ಪಣ

Rashmi Kasaragodu
Updated On : 29 Mar 2014, 2:14 am

ಕನ್ನಡಪ್ರಭ ವಾರ್ತೆ, ಕೋಲಾರ, ಮಾ.28
ಪ್ರತಿ ಚುನಾವಣೆಯಲ್ಲೂ ಕುತಂತ್ರ ರಾಜಕಾರಣ ಮಾಡುತ್ತಾ ಗೆದ್ದು ಬರುತ್ತಿರುವ ಕೆ.ಎಚ್.ಮುನಿಯಪ್ಪ ಅವರನ್ನು ಈ ಬಾರಿ ಸೋಲಿಸಿ, ಮನೆಗೆ ಕಳುಹಿಸಬೇಕು  ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ  ಕೆ.ಶ್ರೀನಿವಾಸಗೌಡ ಅವರು ಹೇಳಿದರು.
   ನಗರದ ತಮ್ಮ ಮನೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನಗರ ಮಟ್ಟದ ಜೆಡಿಎಸ್ ಮುಖಂಡರ ಹಾಗೂ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು. ಕಳೆದ 30 ವರ್ಷಗಳಿಂದ ಮುನಿಯಪ್ಪ ಅವರು ತಮ್ಮ ಸ್ವಾರ್ಥ ಹಿತಾಸಕ್ತಿಯ ರಾಜಕೀಯ ಅನುಕೂಲಕ್ಕಾಗಿ ಪ್ರತಿ ಚುನಾವಣೆಯಲ್ಲೂ, ನನ್ನನ್ನೂ ಸೇರಿಸಿ ವಿ.ಮುನಿಯಪ್ಪ, ಆಂಜನೇಯರೆಡ್ಡಿ, ಚೌಡರೆಡ್ಡಿ, ಕೃಷ್ಣಾರೆಡ್ಡಿ, ಸುಧಾಕಾರ ರೆಡ್ಡಿ, ಎ.ನಾಗರಾಜ, ವೆಂಕಟಶಿವಾರೆಡ್ಡಿ, ರಮೇಶ್ಕುಮಾರ್ ಸೇರಿದಂತೆ ಅನೇಕ ನಾಯಕರನ್ನು ರಾಜಕೀಯವಾಗಿ ತಲೆ ಎತ್ತದಂತೆ ಮಾಡಿದ್ದಾರೆ ಎಂದು ದೂರಿದರು. ಇಂಥ ಸ್ವಾರ್ಥ, ಕುತಂತ್ರ ರಾಜಕಾರಣದ ಕೆ.ಎಚ್.ಮುನಿಯಪ್ಪರನ್ನು ಈ ಬಾರಿ ಸೋಲಿಸುವುದರ ಮೂಲಕ ಸುಮಾರು 30 ವರ್ಷಗಳ ಇವರ ರಾಜಕೀಯವನ್ನು ಜೆಡಿಎಸ್ ಕಾರ್ಯಕರ್ತರು ಈ ಚುನಾವಣೆಯಲ್ಲಿ ಅಂತ್ಯಗೊಳಿಸಬೇಕು ಎಂದು ಹೇಳಿದರು. ಮಾಲೂರು ಶಾಸಕ ಮಂಜುನಾಥ್ ಗೌಡ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಈ ಬಾರಿ ಸನ್ನದ್ಧವಾಗಿದೆ ಎಂದು ಮುಖಂಡರಾದ ಕೆಜಿಎಫ್ನ ಶಂಕರ, ಶ್ರೀನಿವಾಸ, ಶಿಡ್ಲಘಟ್ಟದ ವಿ.ಮುನಿಯಪ್ಪ ಸೇರಿದಂತೆ ಹಲವರು ಹೇಳಿದರು. ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್, ಸದಸ್ಯರಾದ ನಾರಾಯಣಮ್ಮ, ಸುಕುಮಾರ್, ಮುಖಂಡರಾದ ಕೆ.ಎನ್. ರವೀಂದ್ರ ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement