ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿಡ್ಲಘಟ್ಟ ತಾಲೂಕಲ್ಲಿ ಬಿಜೆಪಿ ಪ್ರಚಾರ ಜೋರು

Rashmi Kasaragodu
Updated On : 29 Mar 2014, 2:15 am

ದೇಶದಲ್ಲಿ ಮೋದಿ ಅಲೆ: ಎಂ. ನಾರಾಯಣಸ್ವಾಮಿ ಟಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ

ಶಿಡ್ಲಘಟ್ಟ: ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ಪಟ್ಟಣದ ದೇವಸ್ಥಾನ ಮತ್ತು ದರ್ಗಾದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.
ಪಟ್ಟಣದ ಹೊವಿನ ವೃತ್ತ, ಕೋಟೆ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, 'ದೇಶದಲ್ಲಿ ಮೋದಿ ಅಲೆ ಬೀಸುತ್ತಿದ್ದು, ಬಿಜೆಪಿ ಅಧಿಕ ಸ್ಥಾನಗಳನ್ನು ಗಳಿಸಲಿದೆ. ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ನೋಡಿ ಬೇಸತ್ತಿರುವ ಜನ ಬಿಜೆಪಿಗೆ ಮತ ಹಾಕಿ ಗೆಲ್ಲಿಸಲಿದ್ದಾರೆ' ಎಂದರು.
ಅಬ್ಲುಡು, ದೊಡ್ಡತೇಕ ಹಳ್ಳಿ, ಪಲಿಚೆಲರ್, ಬಶೆಟ್ಟಿಹಳ್ಳಿ, ದಿಬ್ಬೂರ ಹಳ್ಳಿ, ತಿಮ್ಮನಾಯಕನ ಹಳ್ಳಿ, ಈ ತಿಮ್ಮಸಂದ್ರ, ಸಾದಲಿ, ಎಸ್. ದೇವಗಾನ ಹಳ್ಳಿ, ಗಂಜಿಗುಂಟೆ, ಬುರುಡಗುಂಟೆ, ಚಿಲಕಲನೇಪರ್, ಏನಿಗದೆಲೆ, ಮಿಟ್ಟಹಳ್ಳಿ,ಮ ಕೆಂಚಾರ್ಲ ಹಳ್ಳಿಯಲ್ಲಿ ಶುಕ್ರವಾರ ಪ್ರಚಾರ ಕೈಗೊಂಡರು.  ಶನಿವಾರ ಅವರು, ಮಳಮಾಚನ ಹಳ್ಳಿ, ತುಮ್ಮನ ಹಳ್ಳಿ,. ಆನೂರು, ದೇವರ ಮಳ್ಳೂರು, ಕೂತ್ತನೂರು, ವೈ ಹುಣಿಸೇನ ಹಳ್ಳಿ, ಕುಂದಲಗುಕರ್, ಚೀಮಂಗಲ, ಎಚ್. ಕ್ರಾಸ್, ಕುಂಬಿಗಾನ ಹಳ್ಳಿ, ಜಂಗಮಕೋಟೆ, ಹೊಸಪೇಟೆ, ನಾಗಮಂಗಲ, ಜೆ.ವೆಂಕಟಾಪುರ, ಮೇಲೂರು ಮಳ್ಳೂರು, ಭಕ್ತರ ಹಳ್ಳಿ, ಹಂದಿಗನಾಳ  ಗ್ರಾಮಗಳಲ್ಲಿ ಚುನಾವಣಾ ಪ್ರಚಾರವನ್ನು ಕೈಗೂಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement