ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಿರಿಯ ರಾಜಕಾರಣಿ ಕೋದಂಡರಾಮಯ್ಯ ನಿಧನ

Rashmi Kasaragodu
Updated On : 29 Mar 2014, 2:16 am

ಮುಳಬಾಗಲು: ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಬ್ರಾಹ್ಮಣ ಸಮಾಜು ಪ್ರಮುಖರಾಗಿದ್ದ ಮಲ್ಲನಾಯಕನಹಳ್ಳಿಯ ಎಂ.ಎಸ್.ಕೋದಂಡರಾಮಯ್ಯ(85) ಶುಕ್ರವಾರ ನಿಧನರಾದರು.
ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವಾಸುದೇವ್ ಸೇರಿದಂತೆ ಇಬ್ಬರು ಗಂಡು ಮಕ್ಕಳು ಮತ್ತು ಮಗಳು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
60 ಮತ್ತು 70ರ ದಶಕದಲ್ಲಿ ಸಂಸ್ಧಾ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದ ಅವರು ನಂತರ ಜೆಡಿಎಸ್ ಜತೆ ರಾಜಕಾರಣ ಮಾಡಿದರು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದ ಅವರು, ತಾಲೂಕು ಬ್ರಾಹ್ಮಣ ಸಂಘದ ಬೆಳವಣೆಗೆಗೆ ಮಹತ್ತರ ಪಾತ್ರ ವಹಿಸಿದ್ದರು. ಇದರೊಂದಿಗೆ ಪಟ್ಟಣದ ಯಾಜ್ಞವಲ್ಕ್ಯ ಆಶ್ರಮ ಮತ್ತು ಸೂರ್ಯನಾರಾಯಣಸ್ವಾಮಿ ದೇವಾಲಯದ ಅಭಿವೃದ್ಧಿಗೂ ಇವರು ಕಾರಣವಾಗಿದ್ದಾರೆ.
1972ರಲ್ಲಿ ತಾಲೂಕು ಕೃಷಿ ಮಾರುಕಟ್ಟಿ ಸಮಿತಿ ಅಧ್ಯಕ್ಷರಾಗಿದ್ದರು. ಸಮಿತಿಯ ಅಭಿವೃದ್ಧಿಗೆ ಭಾರಿ ಪ್ರಮಾಣದಲ್ಲಿ ಶ್ರಮಿಸಿದ್ದರು ಎಂದು ಈಗ ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿರುವ ಕುರುಡುಮಲೆ ಮಂಜುನಾಥ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ನೆರವೇರಿತು.
ಸಂತಾಪ: ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಮು.ಕೃ. ಪದ್ಮನಾಭರಾವ್, ಮಾಜಿ ಅಧ್ಯಕ್ಷರಾದ ಎಚ್.ಎಸ್. ರಾಮರಾವ್, ನಟರಾಜಯ್ಯರ್, ಎಚ್.ಎಸ್.ಹರೀಶ್, ಮಾಜಿ ಕಾರ್ಯದರ್ಶಿ ಮಂಡಿಕಲ್ ಪುರುಷೋತ್ತಮ, ಶುಕ್ಲಯಜುರ್ವೇದ ಮಹಾ ಸಭೆಯ ಅಧ್ಯಕ್ಷ ಅನಂತಪದ್ಮನಾಭರಾವ್, ಮಾಜಿ ಅಧ್ಯಕ್ಷ  ಅಲಂಗೂರು ಗುರುಶಂಕರ್, ಬಂಗಾರುಪೇಟೆ ರವಿ, ಕಾರ್ಯದರ್ಶಿ ಎಂ.ಗೋಪಾಲ್ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement