ಅಭಿವೃದ್ಧಿಗೆ ಅಡ್ಡಿಪಡಿಸುವವರು ನಾಯಕರಾಗಲು ಸಾಧ್ಯವಿಲ್ಲ
ಮಾಲೂರು: ಅಭಿವೃದ್ಧಿ ಕಾರ್ಯದಲ್ಲಿ ತಮ್ಮ ಅಧಿಕಾರ ಬಳಸಿ ಅಡ್ಡಿ ಪಡಿಸುವವರು ಜನನಾಯಕರಾಗಲು ಸಾಧ್ಯವಿಲ್ಲ ಎಂದು ಶಾಸಕ ಮಂಜುನಾಥ್ಗೌಡ ಹೇಳಿದರು. ಪಟ್ಟಣದಲ್ಲಿ ರು. 20 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಗಜಾಗುಂಡ್ಲ ಕಲ್ಯಾಣಿಯ ಪುನಃಶ್ಚೇತನ ಕಾಮಗಾರಿ ವೀಕ್ಷಿಸಿ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ರು. 5 ಕೋಟಿ ವೆಚ್ಚದಲ್ಲಿ ಪಟ್ಟಣದ ಎಲ್ಲ ರಸ್ತೆಗಳ ಡಾಂಬರೀಕರಣ ಕಾಮಗಾರಿ ಗುತ್ತಿಗೆದಾರನ ಅಸಹಕಾರದಿಂದ ನಿಂತಿದೆ. ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ರವರ ಶಿಷ್ಯನಾಗಿರುವ ಗುತ್ತಿಗೆದಾರನಿಗೆ ಹಾಲಿ ಸಂಸದರು ತಾಕೀತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ಉಪಾಧ್ಯಕ್ಷೆ ಶ್ರೀವಲ್ಲಿ ರಮೇಶ್, ಎಂ.ಪಿ. ವಿಜಯಕುಮಾರ್, ಹನುಮಂತರೆಡ್ಡಿ, ರಾಮಮೂರ್ತಿ, ಅಲೂಮಂಜು, ಜಾಕೀರ್ಖಾನ್, ರಾಮಚಂದ್ರ,ನೀಲಾಚಂದ್ರ ಇದ್ದರು.