ಕುಡಿಯುವ ನೀರಿಗೆ ಆಗ್ರಹಿಸಿ ರಸ್ತೆ ತಡೆ
ಚಿಂತಾಮಣಿ: ಶ್ರೀರಾಮನಗರದ ನಿವಾಸಿಗಳು ಕುಡಿಯುವ ನೀರಿಗೆ ಆಗ್ರಹಿಸಿ ರಸ್ತೆ ತಡೆ ಮಾಡಿದ ಘಟನೆ ನಗರದ ಚೇಳೂರು ರಸ್ತೆಯಲ್ಲಿ ನಡೆದಿದೆ.
ನಗರದ 16 ಮತ್ತು 17 ನೇ ವಾರ್ಡ್ ವ್ಯಾಪ್ತಿಯ ಶ್ರೀರಾಮನಗರ, ಇಡ್ಲಿಪಾಳ್ಯ, ಬಂಡೆಮೇಲೆ ಸುತ್ತಮುತ್ತಲಿನ ನಿವಾಸಿಗಳಿಗೆ ನಗರಸಭೆ ಅಧಿಕಾರಿಗಳು ವಾರಕ್ಕೊಮ್ಮೆಯಾದರೂ ನೀರು ನೀಡದ ಪರಿಣಾಮ ನಿವಾಸಿಗಳು ಪರದಾಡಿಸುತ್ತಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಿಲ್ಲದ ಕಾರಣ ಶನಿವಾರ ರಸ್ತೆತಡೆ ಮಾಡಿ ನೂರಾರು ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಬೀದಿಗಿಳಿದು ಹೋರಾಟ ನಡೆಸಿದರು. ಚೇಳೂರು ರಸ್ತೆ ವಾಟರ್ ಟ್ಯಾಂಕ್ ಬಳಿ ನೂರಾರು ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ರಸ್ತೆ ತಡೆ ನಡೆಸಿದರು. ಇದರಿಂದ ಈ ಮಾರ್ಗವಾಗಿ ಸಂಚರಿಸುವ ನಾಗರಿಕರಿಗೆ ತೊಂದರೆಯಾಯಿತು.