ಜೆಡಿಎಸ್ ಗೆದ್ದರೆ ಕ್ಷೇತ್ರದ ಅಭಿವೃದ್ಧಿ
ಕೋಲಾರ: ಜಿಲ್ಲೆಯಲ್ಲಿ ಆರು ಬಾರಿ ಸಂಸದರಾಗಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೂ ಸ್ಪಂದಿಸದ ಕೆ.ಎಚ್. ಮುನಿಯಪ್ಪರನ್ನು ಸೋಲಿಸಲು ಜೆಡಿಎಸ್ ಕಾನೂನು ಘಟಕ ಸಂಘಟಿತ ಹೋರಾಟ ನಡೆಸುತ್ತದೆ ಎಂದು ಘಟಕದ ಜಿಲ್ಲಾ ಅಧ್ಯಕ್ಷ ಎಂ. ಮುನೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೋಷ್ಠಿಯಲ್ಲಿ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಅರ್. ಜಯರಾಂ, ರಾಜ್ಯ ಉಪಾಧ್ಯಕ್ಷ ಎಲ್. ನಾಗರಾಜ್, ರಾಮಕೃಷ್ಣ, ವಕೀಲರಾದ ಎಸ್.ಒ. ಮಂಜುನಾಥ್ ಇದ್ದರು.
ಸಾಮಾನ್ಯ ವೀಕ್ಷಕರಾಗಿ ಬಿಬೇಕಾನಂದ ಸರಕಾರ್
ಕೋಲಾರ: ಪಂಜಾಬ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಬಿಬೇಕಾನಂದ ಸರಕಾರ್ ಅವರನ್ನು ಭಾರತ ಚುನಾವಣಾ ಆಯೋಗ ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರನ್ನಾಗಿ ನಿಯೋಜಿಸಿದೆ.
ಇವರು ಕೋಲಾರ ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರಗಳ ವೀಕ್ಷಕರಾಗಿರುತ್ತಾರೆ. ಇವರ ವೈಯಕ್ತಿಕ ಮೊ-9417579233, ಕಚೇರಿ ಮೊ-9008917475. ಇವರಿಗೆ ಸಂಪರ್ಕಾಧಿಕಾರಿಯಾಗಿ ಜಿಲ್ಲಾ ತರಬೇತಿ ಕೇಂದ್ರ ಉಪ ಪ್ರಾಂಶುಪಾಲ ಸಿ.ಎಸ್. ವೆಂಕಟರಂಗನ್ರನ್ನು ನೇಮಿಸಲಾಗಿದೆ. ಇವರ ದೂ- 9738216590 ಆಗಿರುತ್ತದೆ. ನೀತಿ ಸಂಹಿತೆ ಉಲ್ಲಂಘನೆಗಳು ಹಾಗೂ ಸಾರ್ವಜನಿಕರಿಗೆ ಮತದಾನಕ್ಕೆ ತೊಂದರೆ ಆಗುತ್ತಿದ್ದರೆ ಸಾಮಾನ್ಯ ವೀಕ್ಷಕರಿಗೆ ತಿಳಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.