ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
ಮಾಲೂರು: ಪ್ರಜಾಪ್ರಭುತ್ವದಲ್ಲಿ ಮತದಾನ ಮಹತ್ವವಾಗಿರುವುದರಿಂದ ಮತಗಟ್ಟೆ ಅಧಿಕಾರಿಗಳು ಮತದಾನ ರೀತಿಗಳ ಬಗ್ಗೆ ಸೂಕ್ತ ತರಬೇತಿ ಪಡೆಯುವುದು ಅವಶ್ಯ ಎಂದು ಮುಖ್ಯ ತರಬೇತುದಾರ ತಿಲೇಗಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಲೋಕಸಭೆ ಚುನಾವಣೆಯ ಮತಗಟ್ಟೆ ಅಧಿಕಾರಿಗಳಿಗಾಗಿ ಶನಿವಾರ ಆಯೋಜಿಸಿಗಿದ್ದ ತರಬೇತಿ ಶಿಬಿರದಲ್ಲಿ ಮಾಹಿತಿ ನೀಡಿ, ಮತಗಟ್ಟೆಯಲ್ಲಿ ಏಂಜೆಟ್ಗಳ ನೇಮಕ ಮಾಡುವಾಗ, ಮತಾದಾರನ ವಯಸ್ಸಿನ ತಕಾರಾರು ಬಂದಾಗ ಕಾನೂನಿನ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸಬೇಕು ಎಂದರು. ಉಪಾನ್ಯಾಸಕ ಅನಂತಮೂರ್ತಿ ಮಾತನಾಡಿದರು. ಶಿಬಿರಕ್ಕೆ ಚುನಾವಣೆಯ ವಿಶೇಷ ವೀಕ್ಷಕ ಬಿಬೇಕನಂದ ಭೇಟಿ ನೀಡಿದ್ದರು. ಸಹಾಯಕ ಚುನಾವಣಾಧಿಕಾರಿ ಪ್ರಸಾದ್ ರೆಡ್ಡಿ, ತಹಸೀಲ್ದಾರ್ ಶಿವಕುಮಾರ್, ಬಿಇಒ ಸುಬ್ರಮಣ್ಯ, ಮುನೇಶ್ವರಚಾರಿ ಇದ್ದರು.