ಮತದಾನ ಕುರಿತು ಪ್ರಬಂಧ ಸ್ಪರ್ಧೆ ಏ.5ಕ್ಕೆ
ಕೋಲಾರ: ಏ.17 ರಂದು ನಡೆಯುವ ಲೋಕಸಭಾ ಚುನಾವಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಏ.5ರಂದು ಬೆಳಿಗ್ಗೆ 11 ಗಂಟೆಗೆ ಕೋಲಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಆಸಕ್ತ ಪ್ರೌಢಶಾಲೆ ಹಾಗೂ ಪದವಿಪೂರ್ವ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಶೈಕ್ಷಣಿಕ ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಜಿಲ್ಲಾ ಪಂಚಾಯತ್ ಸ್ವೀಪ್ ವಿಭಾಗದಲ್ಲಿ ಏ.3 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರು. 2001, ದ್ವಿತೀಯ ರು. 1001 ಮತ್ತು ತೃತೀಯ ರು. 501 ಮೊತ್ತದ ಶೈಕ್ಷಣಿಕ ಪುಸ್ತಕಗಳನ್ನು ನೀಡಲಾಗುವುದು.
ಪ್ರಬಂಧದ ವಿಷಯ: ಪ್ರಜಾಪ್ರಭುತ್ವದ ಬುನಾದಿ, ಚುನಾವಣಾ ಸುಧಾರಣೆಗಳು, ಮತದಾನದ ಹಕ್ಕು, ಯುವಜನತೆ-ಮತದಾನ-ಪ್ರಜಾಪ್ರಭುತ್ವ, ಚುನಾವಣಾ ಆಯೋಗ-ಮತದಾನ-ಪ್ರಜಾಪ್ರಭುತ್ವ. ಮಾಹಿತಿಗೆ ಡಿ.ಆರ್. ಮಂಜುನಾಥ, ದೂ- 08152-241367 ಅನ್ನು ಸಂಪರ್ಕಿಸಬಹುದು.