ಸ್ವಂತ ವೆಚ್ಚದಲ್ಲಿ ರುದ್ರಭೂಮಿ ಅಭಿವೃದ್ಧಿ
ಬಂಗಾರಪೇಟೆ: ಪಟ್ಟಣದ ಹಿಂದು ರುದ್ರಭೂಮಿಯನ್ನು ಪುರಸಭೆ ಸದಸ್ಯ ಹಾಗೂ ಭಜರಂಗದಳ ತಾಲೂಕು ಸಂಚಾಲಕ ಬಿ.ಸಿ. ಶ್ರೀನಿವಾಸಮೂರ್ತಿ ತಮ್ಮ ಸ್ವಂತ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ನಾಗರಿಕರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಅನೇಕ ವರ್ಷಗಳಿಂದ ಪಟ್ಟಣದ ಕುಂಬಾರಪಾಳ್ಯದ ಹಿಂದು ರುದ್ರಭೂಮಿ ಅಭಿವೃದ್ಧಿ ರ್ಕಾದೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಹೆಣಗಳನ್ನು ಮಣ್ಣು ಮಾಡುವವರಿಗೆ ಬೀದಿದೀಪ ಇಲ್ಲದೆ ಪರದಾಡುತ್ತಿದ್ದರು, ಭಜರಂಗದಳ ಹೋರಾಟದ ಪರಿಣಾಮ ಈಗ ಹೈಮಾಸ್ಟ್ ದೀಪ ಬಂದಿದೆ. ಆದರೆ ಕೆಲ ದಿನಗಳ ನಂತರ ಮತ್ತದೆ ಸಮಸ್ಯೆಗಳು ತಾಂಡವಾಡುತ್ತಿದ್ದನ್ನು ಗಮನಿಸಿದ ಬಿ.ಸಿ. ಮೂರ್ತಿ ಸ್ವಂತ ಹಣದಿಂದ ರುದ್ರಭೂಮಿ ಅಭಿವೃದ್ಧಿ ಪಡಿಸಲು ಮುಂದಾಗಿ ಪ್ರತಿ ವರ್ಷ ಯುಗಾದಿ ಹಬ್ಬದ ವೇಳೆ ಜೆಸಿಬಿ ಯಂತ್ರ ತರೆಸಿ ಮುಳ್ಳು ಗಿಡಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಐದು ಕೊಳಾಯಿಗಳನ್ನು ಅಳವಡಿಸಿದ್ದಾರೆ.