ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಟುಂಬ ರಾಜಕಾರಣಕ್ಕೆ ಬೇಸತ್ತು ಬಿಜೆಪಿಗೆ

Rashmi Kasaragodu
Updated On : 31 Mar 2014, 1:09 am

ಗೌರಿಬಿದನೂರು: ಜೆಡಿಎಸ್ ರಿಯಲ್ ಎಸ್ಟೇಟ್‌ಗೆ ಮಣೆ ಹಾಕುವ ಹಾಗೂ ಕುಟುಂಬ ರಾಜಕಾರಣದ ಪಕ್ಷವಾಗಿದ್ದು, ಕಡಗಣನೆಗೆ ಬೇಸತ್ತು ಬಿಜೆಪಿ ಸೇರಿರುವುದಾಗಿ ಮಾಜಿ ಶಾಸಕಿ ಜ್ಯೋತಿರೆಡ್ಡಿ ತಿಳಿಸಿದರು.
ಕಳೆದ 15ವರ್ಷಗಳಿಂದ ನಾನು ಜೆಡಿಎಸ್ ಪಕ್ಷಕ್ಕೆ ದುಡಿದಿದ್ದೇನೆ. ನನ್ನ ದುಡಿಮೆಗೆ ಸೂಕ್ತ ಗೌರವ ಸಿಗಲಿಲ್ಲ. ಅವರ ನಿಲುವುಗಳಿಗೆ ಬೇಸತ್ತು ಹಾಗೂ ರಾಷ್ಟ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂಬ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ ಎಂದರು.
ಇಂದು ಮಧ್ಯಾಹ್ನ 12.30 ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಮುಖಂಡರ ಸಮ್ಮಖದಲ್ಲಿ ಸೇರ್ಪಡೆಗೊಂಡ ನಂತರ ಅವರು ಸುದ್ದಿಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದರು. ಅಭ್ಯರ್ಥಿ ಬಚ್ಚೇಗೌಡ, ಯಲಹಂಕ ಶಾಸಕ ವಿಶ್ವನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿನಾರಾಯಣರೆಡ್ಡಿ ಅವರೊಂದಿಗೆ ಬಿಜೆಪಿ ಕಚೇರಿ ಉದ್ಘಾಟಿಸಿದ ನಂತರ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement