ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇಶದ ಎಲ್ಲ ಸಮಸ್ಯೆಗಳಿಗೆ ಮೋದಿಯಿಂದ ಪರಿಹಾರ

Rashmi Kasaragodu
Updated On : 31 Mar 2014, 1:09 am

ಕೋಲಾರ: ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ, ಬಡತನ,ನಿರುದ್ಯೋಗ, ವಲಸಿಗರ ಹಾವಳಿ ನಿವಾರಣೆ ಮಾಡುವ ಶಕ್ತಿ ನೇರಂದ್ರ ಮೋದಿಗೆ ಇರುವುದರಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾಗಿದ್ದು, ಇಡೀ ದೇಶದಲ್ಲಿ ಮೋದಿ ಅಲೆ ಹೆಚ್ಚುತ್ತಿರುವುದರಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಖಚಿತವೆಂದು ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ ಅಭಿಪ್ರಾಯಪಟ್ಟರು.
ತಾಲೂಕಿನ ವೇಮಗಲ್ ಗ್ರಾಮದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕೋಲಾರದಲ್ಲಿ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲು ಸಾವಿರಾರು ಮತದಾರರು ಉತ್ಸುಕರಾಗಿದ್ದಾರೆ, ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಿಜೆಪಿಯ ಪರವಾಗಿ ಮತಯಾಚಿಸಿದಲ್ಲಿ ನಮ್ಮ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಗೆಲ್ಲುವುದರಲ್ಲಿ ಅನುಮಾನವಿಲ್ಲವೆಂದರು.
ವಾಜಪೇಯಿ ನಂತರ ದೇಶದ ಜ್ವಲಂತ ಸಮಸ್ಯೆ ನಿವಾರಣೆ ಮಾಡಲು ಬೇರೆ ಯಾರಿಂದಲ್ಲೂ ಆಗಲಿಲ್ಲ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ನಮ್ಮ ಜಿಲ್ಲೆಯವರೇ ಆದ ಕೆ.ಎಚ್. ಮುನಿಯಪ್ಪ ಆರು ಬಾರಿ ಗೆದ್ದು 10 ವರ್ಷ ಸಚಿವರಾಗಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲವೆಂದು ಆರೋಪಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ ಮಾತನಾಡಿ, ಯುಪಿಎ ಸರ್ಕಾರಗಳ ಭ್ರಷ್ಟಾಚಾರದಿಂದ ಜನತೆ ಬೇಸತ್ತಿದ್ದಾರೆ. ಕೆ.ಎಚ್. ಮುನಿಯಪ್ಪ ಜಿಲ್ಲೆಗೆ ಶಾಶ್ವತ ನೀರಾವರಿ ಸಲವತ್ತು ಕಲ್ಪಿಸಲು ವಿಫಲರಾಗಿದ್ದಾರೆಂದು ದೂರಿದರು. ವೇಮಗಲ್ ಶಕ್ತಿ ಕೇಂದ್ರದ ಸಿ.ಡಿ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಓಹಿಲೇಶ್, ನಗರ ಘಟಕದ ಅಧ್ಯಕ್ಷ ಜಜಯಂತಿಲಾಲ್, ಆಶ್ವಥ್, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ವೆಂಕಟಸ್ವಾಮಿ, ರಾಮೇಗೌಡ, ರಘು, ಬಿ.ಎಂ. ಕೃಷ್ಣಪ್ಪ, ಲೋಕೇಶ್, ನವೀನ್, ಅಶೋಕ್, ಪ್ರಸನ್ನಕುಮಾರ್, ಸುನೀಲ್, ಮೀನಾಕ್ಷಿ, ನಂದಿಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement