ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ಫೋಟ ಹಿನ್ನೆಲೆ: ತೀವ್ರ ತಪಾಸಣೆ

Mainashree
Updated On : 2 May 2014, 12:31 pm

ಕ.ಪ್ರ.ವಾರ್ತೆ ್ಣ ಬಂಗಾರಪೇಟೆ ್ಣ ಮೇ 1
ಚೆನ್ನೈನಲ್ಲಿ ಗುರುವಾರ ರೈಲಿನಲ್ಲಿ ದುಷ್ಕರ್ಮಿಗಳು ಬಾಂಬ್ ಇಟ್ಟು ಒಬ್ಬರ ಸಾವಿಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಅಲರ್ಟ್ ಆದ ಪೊಲೀಸರು ಪಟ್ಟಣದ ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣಗಳಲ್ಲಿ ತೀವ್ರವಾಗಿ ತಪಾಸಣೆ ಮಾಡಿದರು. ಚೆನ್ನೈನಲ್ಲಿ ಬೆಳಗ್ಗೆ ರೈಲಿಗೆ ಬಾಂಬ್ ಇಟ್ಟ ಸುದ್ದಿ ಎಲ್ಲೆಡೆ ಹರಡಿ ಪೊಲೀಸರು ರೈಲ್ವೆ ನಿಲ್ದಾಣಗಳಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಪಟ್ಟಣದಲ್ಲಿ ಮದ್ಯಾಹ್ನದಿಂದ ಚೆನ್ನೈನಿಂದ ಬಂಗಾರಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಎಲ್ಲಾ ರೈಲುಗಳನ್ನು ಶ್ವಾನದಳ ಮೂಲಕ ತಪಾಸಣೆ ಮಾಡಿದರು. ಅಲ್ಲದೆ ನಿಲ್ದಾಣಕ್ಕೆ ಬಂದು ಹೋಗುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆ ಮಾಡಿದರು.ಅದೇ ರೀತಿಯಲ್ಲಿ ಜನಸಂದಣಿ ಹೆಚ್ಚಾಗಿರುವ ಬಸ್‌ನಿಲ್ದಾಣಗಳಲ್ಲಿಯೂ ತಪಾಸಣೆ ಕೈಗೊಂಡರು. ಮಧ್ಯಾಹ್ನದಿಂದ ಸಂಜೆವರೆಗೂ ಪೊಲೀಸರು ಜನರು ಅಧಿಕವಾಗಿರುವ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಮಾಡಿದರು.ಇಲಾಖೆಯ ಮೇಲಧಿಕಾರಿಗಳ ಸೂಚನೆ ಮತ್ತೆ ಬರುವವರೆಗೂ ತಪಾಸಣೆ ನಿರಂತರವಾಗಿ ಸಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement