ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

12ನೇ ಶತಮಾನದ ಮಹಾನ್ ಚೇತನ ಬಸವಣ್ಣ

Mainashree
Updated On : 2 May 2014, 11:41 am

ಶಿಡ್ಲಘಟ್ಟ: 12ನೇ ಶತಮಾನದ ಮಹಾನ್ ಚೇತನ ಕ್ರಾಂತಿಕಾರಿ ಬಸವಣ್ಣ ಎಂದು ಶಾಸಕ ಎಂ. ರಾಜಣ್ಣ  ಹೇಳಿದರು. ಪಟ್ಟಣದ ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಲ್ಯಾಣ ಬಸವೇಶ್ವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಜಾತಿರಹಿತ ಹಾಗೂ ವರ್ಗರಹಿತ ಸಮಾಜದ ನಿರ್ಮಾಣಕ್ಕಾಗಿ ಕ್ರಾಂತಿ ನಡೆಸಿದ ಬಸವಣ್ಣ ಸಮಾಜದ ಮಹಾಪುರುಷರು ಎಂದರು.
ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೇ ದೀನ ದಲಿರಿಗೆ ಅಮೂಲ್ಯವಾದ ಭೋದನೆ ನೀಡಿದ್ದಾರೆ ಎಂದರು. ವಿಜಯಪುರ ಶಾಖಾ ಮಠದ ಮಹದೇವ ಸ್ವಾಮಿಜೀ ಮಾತನಾಡಿ, Ú 12 ನೇ ಶತಮಾನದ ಕಾಲವನ್ನು ಪುನರ್ ವಿಮರ್ಶೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜಾತಿ ಜಾತಿಗಳಲ್ಲಿನ ದ್ವೇಷಭಾವಗಳನ್ನು ತ್ಯಜಿಸಿ ಮಾನವಕುಲ ಒಂದಾಗಬೇಕಾಗಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ವಾಗೀಶ್ ಪ್ರಸಾದ್ ಮಾತನಾಡಿ, ಬಸವಣ್ಣನವರು ಕಂಡಿದ್ದ ಕನಸನ್ನು ನನಸು ಮಾಡುವ ಕೆಲಸವನ್ನು ಎಲ್ಲಾ ಜನಾಂಗಗಳು ಮಾಡಬೇಕು, ಜಾತಿಯ ಕಾಲಂಗಳನ್ನು ತೆಗೆದುಹಾಕಿದರೆ ಎಲ್ಲಾ ಜಾತಿ ಜನಾಂಗದವರು ಒಂದಾಗಲು ಸಾಧ್ಯವಿದೆ ಎಂದರು. ಮಹಾಲಿಂಗಯ್ಯ ಮಠದ್ ಅವರ ಅಂಧಕಲಾವಿದರ ತಂಡದಿಂದ ವಚನಗಾಯನ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement