ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿ
ಕ.ಪ್ರ. ವಾರ್ತೆ ಟಿ ಹಾಸನ ಟಿ ಮೇ 2
ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಜಿಲ್ಲಾ ಕಾಂಗ್ರೆಸ್ ಾರ್ಮಿಕ ಘಟಕದ ಅಧ್ಯಕ್ಷ ಸನ್ನಿ ಆಂಡ್ರೋಸ್ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಕಾರ್ಮಿಕ ಘಟಕದಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಪಕ್ಷದಿಂದ ಕಾರ್ಯಕರ್ತರು ಶ್ರಮವಹಿಸಬೇಕಾಗಿದೆ. ಕಾರ್ಮಿಕರಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಯನ್ನು ಸರಿಯಾಗಿ ತಲುಪುತ್ತಿದಿಯೇ ಎಂಬುದನ್ನು ತಿಳಿದು ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ತಾರಾ ಚಂದನ್ ಮಾತನಾಡಿ, ಕಾರ್ಮಿಕರ ಮೇಲೆ ಶೋಷಣೆ ಬಹಳಷ್ಟು ಇದೆ. ಪಶು ರೀತಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ ಎಂದರು.
ಮೊದಲು ಅಮೇರಿಕದಲ್ಲಿ ಪ್ರಾರಂಭಗೊಂಡ ಕಾರ್ಮಿಕರ ಹೋರಾಟ, ಈಗ ಎಲ್ಲೆಡೆ ಇದೆ. ಭಾರತದಲ್ಲೂ ಅದು ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಮಿಕರ ಸಮಸ್ಯೆ ನಿವಾರಿಸಲು ಸಮಾವೇಶ ಮಾಡಿ ರು. 8 ಕೋಟಿ ಹಣವನ್ನು ಅವರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಮುಂದಿನ ದಿವಸಗಳಲ್ಲಿ ಗ್ರಾಮಗಳಿಗೆ ತೆರಳಿ ಶಿಬಿರ ಮಾಡಿ ಸರ್ಕಾರದ ಯೋಜನೆಯನ್ನು ಜನತೆಗೆ ತಿಳಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಇದೇ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಕಾರ್ಮಿಕ ಘಟಕದ ನಗರಾಧ್ಯಕ್ಷ ರಾಘವಾಚಾರ್, ಕಾರ್ಯದರ್ಶಿ ರಣಜಿತ್ ಸಿಂಹ, ರಾಜ್ಯ ಕಾರ್ಯದರ್ಶಿ ಅಪ್ಪಾಜಿಗೌಡ, ಮುಖಂಡರಾದ ಬಸವರಾಜ್, ವಸಂತಕುಮಾರ್, ಕುಮಾರಸ್ವಾಮಿ, ಪೂರ್ಣಿಮ, ವೆಂಕಟೇಗೌಡ, ಮೀನ, ಶೇಖರ್ ಇತರರು ಇದ್ದರು.